ವಿಧಾನಸಭಾ ಚುನಾವಣೆ-2023, ಜಿಲ್ಲೆಯಾದ್ಯಂತ 14.28ಲಕ್ಷ ರೂ. ಮೌಲ್ಯದ ಅಬಕಾರಿ ವಸ್ತುಗಳ ಜಪ್ತಿ
ಸರಕಾರ ನ್ಯೂಸ್ ವಿಜಯಪುರ
ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಏಪ್ರಿಲ್ 4ರವರೆಗೆ ಜಿಲ್ಲೆಯಲ್ಲಿ ವಿವಿಧೆಡೆ ಅಬಕಾರಿ ದಾಳಿ ನಡೆಸಿ 14,28,472 ರೂ. ಮೌಲ್ಯದ ಅಬಕಾರಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತರು ತಿಳಿಸಿದ್ದಾರೆ.
ಚುನಾವಣೆಯನ್ನು ಅತ್ಯಂತ ನಿಷ್ಪಕ್ಷಪಾತ ಹಾಗೂ ಶಾಂತಿಯುತವಾಗಿ ನಡೆಸುವ ದೃಷ್ಟಿಯಿಂದ ಅಬಕಾರಿ ಇಲಾಖೆಯಿಂದ ವಿವಿಧ ಕ್ರಮ ಕೈಗೊಳ್ಳಲಾಗಿದ್ದು, ಈವರೆಗೆ 74 ಅಬಕಾರಿ ದಾಳಿ ನಡೆಸಿ, 29 ಘೋರ, 05 ಬಿಎಲ್‍ಸಿ ಹಾಗೂ 15(ಎ) 21 ಪ್ರಕರಣಗಳು ಸೇರಿದಂತೆ 55 ಪ್ರಕರಣಗಳನ್ನು ದಾಖಲಿಸಿ, 33 ಆರೋಪಿಗಳನ್ನು ವಶಪಡಿಸಿಕೊಳ್ಳಲಾಗಿದೆ. 1,69,264 ರೂ. ಮೌಲ್ಯದ 386.71 ಲೀ. ಮದ್ಯ, 6400 ರೂ. ಮೌಲ್ಯದ 7.2 ಲೀ. ಹೊರ ರಾಜ್ಯದ ಮದ್ಯ, 8560 ರೂ. ಮೌಲ್ಯದ 35.75 ಲೀ. ಬೀಯರ್, 4250 ರೂ. ಮೌಲ್ಯದ 42.5 ಲೀ. ಕಳ್ಳಭಟ್ಟಿ ಸರಾಯಿ ಸೇರಿದಂತೆ 1,88,474 ರೂ. ಮೌಲ್ಯದ 472.16 ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಅದರಂತೆ,ಅಬಕಾರಿ ಅಕ್ರಮಕ್ಕೆ ಬಳಸಿಕೊಳ್ಳುತ್ತಿರುವ 10,40,000ರೂ. ಮೌಲ್ಯದ 19 ದ್ವಿಚಕ್ರ ವಾಹನ ಹಾಗೂ 2 ಲಕ್ಷ ರೂ. ಮೌಲ್ಯದ 01 ನಾಲ್ಕು ಚಕ್ರ ವಾಹನ ಸೇರಿದಂತೆ ಒಟ್ಟು 12,44,000 ರೂ. ಮೌಲ್ಯದ 20 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.