ಬಬಲೇಶ್ವರದಲ್ಲಿ ತಳವಾರ ಸಮಾಜದ ಸಭೆ, ಕೋಟ ಶ್ರೀನಿವಾಸಗೆ ಅಭಿನಂದಿಸಲು ತೀರ್ಮಾನ
ಸರಕಾರ್ ನ್ಯೂಸ್ ಬಬಲೇಶ್ವರ
ತಳವಾರ -ಪರಿವಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿದ ಹಿನ್ನೆಲೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕರೆಯಿಸಿ ಸನ್ಮಾನಿಸುವುದರ ಜೊತೆಗೆ ಸಾಂಕೇತಿಕವಾಗಿ ಜಾತಿ ಪ್ರಮಾಣ ಪತ್ರ ನೀಡಲು ತಳವಾರ-ಪರಿವಾರ ಸಮಾಜ ತೀರ್ಮಾನಿಸಿತು.
ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಶುಕ್ರವಾರ ನಡೆದ ತಳವಾರ-ಪರಿವಾರ ಸಮುದಾಯ ಹಾಗೂ ಬಿಜೆಪಿ ಮುಖಂಡರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಬಬಲೇಶ್ವರ ವಿಧಾನ ಸಭೆ ಕ್ಷೇತ್ರದ ಮದಗುಣಕಿಯಲ್ಲಿ ನ.29 ರಂದು ತಳವಾರ-ಪರಿವಾರ ಸಮಾಜದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ನೇತೃತ್ವ ವಹಿಸಲಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಆಹ್ವಾನಿಸಿ ಸನ್ಮಾನಿಸಲಾಗುವುದು. ಜೊತೆಗೆ ಸಾಂಕೇತಿಕವಾಗಿ ಜಾತಿ ಪ್ರಮಾಣ ಪತ್ರ ವಿತರಿಸಲು ರೂಪು ರೇಷೆ ಸಿದ್ಧಪಡಿಸಲಾಯಿತು.
ಬಿಜೆಪಿ ಮಂಡಲ ಅಧ್ಯಕ್ಷ ವಿಠ್ಠಲ ಕಿರಸೂರ, ಜಿಪಂ ಮಾಜಿ ಸದಸ್ಯರಾದ ಗುರಲಿಂಗಪ್ಪ ಅಂಗಡಿ, ಕಲಪ್ಪ ಕೊಡಬಾಗಿ ಹಾಗೂ ಬಾಲರಾಜ ರೆಡ್ಡಿ ಮತ್ತಿತರರಿದ್ದರು.