ನಮ್ಮ ವಿಜಯಪುರ

ಪೊಲೀಸರ ಭರ್ಜರಿ ಬೇಟೆ; 37 ಬೈಕ್ ವಶ, ಫೈನಾನ್ಸ್ ಕಳ್ಳರ ಬಂಧನ

ಸರಕಾರ ನ್ಯೂಸ್ ವಿಜಯಪುರ

ಸಿಂದಗಿ ತಾಲೂಕಿನಲ್ಲಿ ಕಳೆದ‌ ಕೆಲವು ದಿನಗಳ ಹಿಂದೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳರ ಹೆಡೆಮುರಿ ಕಟ್ಟಿರುವ ಖಾಕಿ ಪಡೆ ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್, ಕಾರ್ ಹಾಗೂ ನಗದು ವಶಕ್ಕೆ ಪಡೆದಿದ್ದಾರೆ.

ಯಂಕಂಚಿ ಬೈಪಾಸ್ ಬಳಿ ಅನುಮಾನಾಸ್ಪದವಾಗಿ ತಿರುವಾಡುತ್ತಿದ್ದ ಕಳ್ಳರನ್ನು ಬಂಧಿಸಿ ವಿಚಾರಣೆ ನಡೆಸಲಾಗಿ ಬೈಕ್ ಕಳ್ಳರ ಮುಖವಾಡ ಬಯಲಾಗಿದೆ.

ಬಸವರಾಜ ಹುಣಸಿಗಿಡದ, ಹುಲುಗಪ್ಪ ಕೂಕಲೋರ, ಕೊಂಡಯ್ಯ ಪಾರ್ವತಿದೊಡ್ಡಿ, ರವಿಕುಮಾರ ಪಾರ್ವತಿದೊಡ್ಡಿ ಬಂಧಿತ ಆರೋಪಿಗಳು. ಇವರಿಂದ 16.65 ಲಕ್ಷ ರೂ.ಮೌಲ್ಯದ 37 ಬೈಕ್ ವಶಕ್ಕೆ ಪಡೆಯಲಾಗಿದೆ.

ಇನ್ನು ಬ್ಯಾಂಕ್ ಮತ್ತು ಫೈನಾನ್ಸ್ ಗಳಲ್ಲಿ ಕಳ್ಳತನ ಮಾಡಿ ಪ್ರಭು ಹಲಗಿ, ಅನಿಲ ನಾಯ್ಕೋಡಿ, ಬಸವರಾಜ ಮಾದರ ಇವರನ್ನು ಬಂಧಿಸಿ ಇವರಿಂದ 2.20 ಲಕ್ಷ ರೂ.ನಗದು ಹಾಗೂ ಕಾರ್ ವಶಕ್ಕೆ ಪಡೆಯಲಾಗಿದೆ ಎಂದು ಎಸ್ ಪಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.

error: Content is protected !!