ವಿಜಯಪುರ

ಗಂಗಾ ಕಲ್ಯಾಣ ಯೋಜನೆ ಬೋರವೆಲ್ ಹಾಕಿಸಿಕೊಡಲು ಲಂಚಕ್ಕೆ ಬೇಡಿಕೆ, ಲೋಕಾಯುಕ್ತ ಬಲೆಗೆ ಬಿದ್ದ ನಿಗಮದ ಅಧಿಕಾರಿ- ಕ್ಲರ್ಕ್ !!!

ಸರಕಾರ ನ್ಯೂಸ್ ವಿಜಯಪುರ

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಹಾಕಿಸಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿ ಹಾಗೂ ಕ್ಲರ್ಕ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಂಗಳವಾರ ಸಂಜೆ ನಡೆದ ಕಾರ್ಯಾಚರಣೆಯಲ್ಲಿ ನಿಮಗದ ಜಿಲ್ಲಾಧಿಕಾರಿ ಕಲ್ಲಪ್ಪ ಭಾವಿಕಟ್ಟಿ ಹಾಗೂ ಕ್ಲರ್ಕ್ ಸಲೀಂ ಕುಮಟಗಿ ಸಿಕ್ಕಿಬಿದ್ದಿದ್ದು ಇಬ್ಬರ ಮೇಲೂ ದೂರು ದಾಖಲಿಸಲಾಗಿದೆ.

ಚಡಚಣ ತಾಲೂಕಿನ ಧುಮಕನಾಳ ಗ್ರಾಮದ ಸರ್ವೆ ನಂ.39/3ರ 3 ಎಕರೆ ಜಮೀನಿನಲ್ಲಿ ಸರ್ಕಾರದಿಂದ ಮಂಜೂರಾಗಿರುವ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಹಾಕಿಸಿಕೊಡಲು 60 ಸಾವಿರ ರೂಪಾಯಿಗೆ ಬೇಡಿಕೆ ಇರಿಸಲಾಗಿತ್ತು. ಆ ಭಾಗವಾಗಿ ಮೊದಲ ಕಂತಿನಲ್ಲಿ 30 ಸಾವಿರ ರೂಪಾಯಿ ಪಡೆಯುವಾಗ ಲೋಕಾಯುಕ್ತರ ಕೈಗೆ ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದಾರೆ.

ಲೋಕಾಯುಕ್ತ ಎಸ್‌ಪಿ ಟಿ.ಮಲ್ಲೇಶ್ ಮಾರ್ಗದರ್ಶನ ಹಾಗೂ ಉಪಾಧೀಕ್ಷ ಸುರೇಶ ರೆಡ್ಡಿ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಆನಂದ ವಿ.ಟಕ್ಕನ್ನವರ್, ಆನಂದ ಡೋಣಿ ಹಾಗೂ ಸಿಬ್ಬಂದಿಯಾದ ಸಂತೋಷ ಅಮರಖೇಡ, ಎ.ಖಾದಿರ ಮುಲ್ಲಾ, ಗುರು ಹಡಪದ, ಶಂಕರ ಕಟೆ, ಈರಣ್ಣ ಕನ್ನೂರ, ಆನಂದ ಪಡಶೆಟ್ಟಿ, ಅಕ್ಬರ್ ಗೋಲಗೇರಿ, ಮದನಸಿಂಗ್ ರಜಪೂತ, ಮಾಳಪ್ಪ ಸಲಗೊಂಡ, ಸಂತೋಷ ಚವಾಣ್ ಹಾಗೂ ವಸೀಮ್ ಅಕ್ಕಲಕೋಟ್ ಒಳಗೊಂಡ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದೆ.

error: Content is protected !!