ಇದ್ದಕ್ಕಿದ್ದಂತೆ ಬೈಕ್‌ಗೆ ಹೊತ್ತಿಕೊಂಡ ಬೆಂಕಿ, ಸ್ಥಳೀಯರಲ್ಲಿ ಆತಂಕ…..!
ಸರಕಾರ್ ನ್ಯೂಸ್ ದೇ.ಹಿಪ್ಪರಗಿ
ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಜ್ವಾಲೆ ಕ್ಷಣಮಾತ್ರದಲ್ಲಿ ಬೈಕ್‌ಗೆ ಆವರಿಸಿಕೊಂಡು ಬೈಕ್ ಸಂಪೂರ್ಣ ಹೊತ್ತಿ ಉರಿದ ಘಟನೆ ದೇವರಹಿಪ್ಪರಗಿ ಪಟ್ಟಣದ ಬಸ್ ನಿಲ್ದಾಣದ ಬಳಿ ಶನಿವಾರ ನಡೆದಿದೆ.
ಹಾಶಿಂಪೀರ ಹಚ್ಚಾಳ ಎಂಬುವವರಿಗೆ ಸೇರಿದ ಬೈಕ್ ಬೆಂಕಿಗಾಹುತಿಯಾಗಿದೆ. ರಸ್ತೆ ಬದಿ ಬೈಕ್ ನಿಲ್ಲಿಸಿ ತರಕಾರಿ ತರಲು ಹೋಗಿದ್ದ ಹಾಶಿಂಪೀರ ಹಚ್ಚಾಳಗೆ ಮರಳಿ ಬರುವಷ್ಟರಲ್ಲಿ ಶಾಕ್ ಕಾದಿತ್ತು. ಸ್ವಲ್ಪ ಕಿಡಿ ಹೊತ್ತಿಕೊಂಡು ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತು. ಸ್ಥಳೀಯರು ಕೂಡಲೇ ನೀರುಹಾಕಿ ಬೆಂಕಿ ನಂದಿಸಿದರು. ಘಟನೆಯಿಂದ ಕೆಲ ಕಾಲ ಆತಂಕ ಸೃಷ್ಠಿಯಾಯಿತು.