ನಿಶ್ಚಿತಾರ್ಥ ಹಾಳು ಮಾಡಿದ್ದಕ್ಕಾಗಿ ಕೊಲೆ, ಕೊನೆಗೂ ಆರೋಪಿ ಅಂದರ್…..ಎಸ್‌ಪಿ ಋಷಿಕೇಶ್ ಹೇಳಿದ್ದೇನು?
ಸರಕಾರ ನ್ಯೂಸ್ ವಿಜಯಪುರ
ಯುವಕನನ್ನು ಚಾಕುವಿನಿಂದ ಚುಚ್ಚಿ ಬರ್ಬರ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ಧಾರೆ.
ವಿಜಯಪುರ ನಗರದ ಹಕೀಂ ಚೌಕ್ ಬಳಿ ಭಾನುವಾರ ಮಧ್ಯಾಹ್ನ ಪುಣೆಯ ಆಯಾನ್ ಶೇಖ್ ಎಂಬಾತನ ಕೊಲೆಯಾಗಿತ್ತು. ಸ್ನೇಹಿತನ ಮದುವೆಗೆ ಬಂದಿದ್ದ ಆಯಾನ್ ಶೇಖ್ ಬರ್ಬರವಾಗಿ ಹತ್ಯೆಯಾಗಿತ್ತು. ಘಟನೆಗೆ ಅನೈತಿಕ ಸಂಬಂಧವೇ ಕಾರಣ ಎನ್ನಲಾಗಿತ್ತು.
ಆದರೆ, ಇದೀಗ ಕೊಲೆ ಆರೋಪಿ ಹುಸೇನ್‌ಸಾಬ್ ನಂದಿಹಾಳ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ನಿಶ್ಚಿತಾರ್ಥ ಹಾಳು ಮಾಡಿದ್ದಕ್ಕಾಗಿ ಕೊಲೆ ಮಾಡಿರುವುದು ಗೊತ್ತಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದೆ ಎಂದು ಎಸ್‌ಪಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)