ವಿಜಯಪುರ

ಮದುವೆಗೆ ಬಂದ ಯುವಕ ಬರ್ಬರ ಹತ್ಯೆಯಾದ, ಹಾಡ ಹಗಲೇ ನಡೆದ ಭೀಕರ ಕೊಲೆ, ರಕ್ತಸಿಕ್ತ ಕೃತ್ಯಕ್ಕೆ ಬೆಚ್ಚಿ ಬಿದ್ದ ಗುಮ್ಮಟ ನಗರಿ

ಸರಕಾರ‌ ನ್ಯೂಸ್ ವಿಜಯಪುರ

ಮದುವೆ ಕಾರ್ಯಕ್ರಮಕ್ಕೆ ಬಂದ ಯುವಕನೋರ್ವನನ್ನು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಇಲ್ಲಿನ ಹಕ್ಕಿಂ ಚೌಕ್ ನಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಆಯನ್ ಸಲಾವುದ್ದೀನ್ ಶೇಖ್ ಹತ್ಯೆಯಾದ ಯುವಕ.

ಮಧ್ಯಾಹ್ನ ಮದುವೆ ಕಾರ್ಯಕ್ರಮದಲ್ಲಿರಬೇಕಾದರೆ ಹುಸೇನ್‌ಸಾಬ್ ನಂದಿಹಾಳ ಎಂಬಾತ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಚಾಕುವಿನಿಂದ ಇರಿದಿದ್ದು ಆಯನ್ ಸಲಾವುದ್ದೀನ್ ನ ಮೈಯೆಲ್ಲ ರಕ್ತಸಿಕ್ತವಾಗಿದೆ.
ಘಟನೆಗೆ ಅನೈತಿಕ ಸಂಬಂಧವೇ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಎಎಸ್ ಪಿ ಶಂಕರ ಮಾರಿಹಾಳ ಸೇರಿದಂತೆ ಗೋಳಗುಮ್ಮಟ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!