ಕಾಂಗ್ರೆಸ್ ಪ್ರಚಾರ ಸಭೆಯ ಮೇಲೆ ಕಲ್ಲು ತೂರಾಟ…ಅಯ್ಯಯ್ಯೋ ಎಲ್ಲಿ? ಏನಿದು ಅವಾಂತರ?
ಸರಕಾರ ನ್ಯೂಸ್ ಮುದ್ದೇಬಿಹಾಳ
ರಾಜ್ಯ ವಿಧಾನ ಸಭೆ ಚುನಾವಣೆ ಕಾವು ತಾರಕಕ್ಕೇರಿದ್ದು, ಈವರೆಗೇ ಆರೋಪ, ಪ್ರತ್ಯಾರೋಪ ಮತ್ತು ಬೈಗುಳಗಳಿಗೆ ಸೀಮಿತವಾಗಿದ್ದ ಕದನ ಇದೀಗ ಕಲ್ಲು ತೂರುವ ಮಟ್ಟಕ್ಕೆ ತಲುಪಿದೆ !
ಹೌದಯ, ಮುದ್ದೇಬಿಹಾಳ ತಾಲೂಕಿನ ಗೋನಾಳ ಎಸ್.ಎಚ್ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್. ನಾಡಗೌಡ ಪ್ರಚಾರ ಮಾಡುತ್ತಿದ್ದ ಸಭೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿದ್ದ ಓರ್ವ ಮಹಿಳೆಗೆ ಗಂಭೀರ ಗಾಯಗಳಾಗಿವೆ. ಗೋನಾಳ ಎಸ್.ಎಚ್ ಗ್ರಾಮದ ಶಾಂತಾಬಾಯಿ ಭೀಮಪ್ಪ ಇಂಡಿ(52) ಗಾಯಗೊಂಡ ಮಹಿಳೆ.
ಗಾಯಾಳುವಿಗೆ ತಕ್ಷಣ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)