ನಮ್ಮವರಿಂದಲೇ ಮೋಸದ ರಾಜಕಾರಣ, ಶಿವಾನಂದ ಪಾಟೀಲ ಹೇಳಿದ್ದು ಯಾರ ಬಗ್ಗೆ?
ಸರಕಾರ ನ್ಯೂಸ್ ವಿಜಯಪುರ
ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ವಿಜಯಪುರದಿಂದ ನಮ್ಮವರೇ ನನ್ನ ವಿರುದ್ದ ಕುತಂತ್ರ ರಾಜಕಾರಣ ನಡೆಸುತ್ತಿದ್ದಾರೆ ಎಂದು ಕಾಂಗ್ರೇಸ್ ಅಭ್ಯರ್ಥಿ ಶಿವಾನಂದ ಪಾಟೀಲ ಆರೋಪಿಸಿದ್ದರೆ.
ಅವರು ಪತ್ರಿಕಾಗೊಷ್ಠಿಯಲ್ಲಿ ಇಂದು ಮಾತನಾಡಿ, ಯಾರು ಏನೇ ಕುತಂತ್ರ ,ಷಡ್ಯಂತ್ರ ನಡೆಸಿದರು ಬಸವನ ಬಾಗೇವಾಡಿ ಕ್ಷೇತ್ರದ ಜನತೆ ನನ್ನೊಂದಿಗಿದ್ದಾರೆ ಹೀಗಾಗಿ ನಾನು ಗೆದ್ದೇ ಗೆಲ್ಲುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯ ಎಂಟು ಮತಕ್ಷೇತ್ರಗಳಲ್ಲಿ ನನ್ನ ಅಭಿಮಾನಿಗಳು, ಹಿತೈಷಿಗಳು ಅಪಾರ ಸಂಖ್ಯೆ ನಾನೇನಾದರು ಅಂಥ ರಾಜಕಾರಣಕ್ಕೆ ಕೈ ಹಾಕಿದರೆ ಪರಿಸ್ಥಿತಿ ನೆಟ್ಟಗಿರುವದಿಲ್ಲ ಎಂದು ತಮ್ಮ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು,
ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಕಡಿಮೆ ಇದ್ದರೂ ವಿಶೇಷವಾಗಿ ನನ್ನು ಗುರಿಯಾಗಿಸಿ ಎಐಎಂಐಎಂ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ, ಮೇಲ್ನೋಟಕ್ಕೆ ಕಾಂಗ್ರೆಸ್ ಎಂದು ಹೇಳಿಕೊಳ್ಳುವ ಮೌಲಾನಾ ಒಬ್ಬರು ಇದರ ಹಿಂದೆ ಇದ್ದಾರೆ, ನಮ್ಮ ಪಕ್ಷದವರು ಅವರ ಹಿಂದೆ ಇದ್ದಾರೆ ಎಂದು ಭಾಸವಾಗುತ್ತದೆ, ಚುನಾವಣೆ ನಂತರ ಎಲ್ಲದಕ್ಕೂ ಪ್ರತ್ಯುತ್ತರ ನೀಡುವೆ ಎಂದರು.
ಮುಸ್ಲಿಂ ಬಾಹುಳ್ಯ ಮತದಾರರಿರುವ ಕ್ಷೇತ್ರದಲ್ಲಿ ಎಐಎಂಐಎಂ ಅಭ್ಯರ್ಥಿ ಕಣಕ್ಕಿಳಿಸಿಲ್ಲ, ಆದರೆ ಬಸವನ ಬಾಗೇವಾಡಿಯನ್ನು ವಿಶೇಷ ಟಾರ್ಗೆಟ್ ಮಾಡಿ ಅಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ, ನಮ್ಮವರೇ ಕೆಲವೊಬ್ಬರು ಹಿಂದೆ ಇದ್ದಾರೆ ಎಂದರು.
ಮೌಲಾನಾ ಒಬ್ಬರು ಎಐಎಂಎಐಎಂ ಹಾಕಿ, ಇಲ್ಲವಾದರೆ ಜನತಾ ದಳಕ್ಕೆ ಹಾಕಿ ಎನ್ನುತ್ತಿದ್ದಾರೆ, ಹೀಗಾದರೆ ನೇರವಾಗಿ ಬಿಜೆಪಿಗೆ ಹಾಕಿ ಎಂದು ಖಾರವಾಗಿ ನುಡಿದರು. ೧೦ ಮತಗಳು ಸಹ ಬಿಜೆಪಿಗೆ ಮುಸ್ಲಿಂ ಮತಗಳು ಹೋಗುವದಿಲ್ಲ
ಎಂದ ಅವರು ನಾನು ಎಂದಿಗೂ ಕೆಲವು ವಿಚಾರಗಳನ್ನು ಹೇಳಿಲ್ಲ, ಇಷ್ಟು ದಿನ ಅಪಾರವಾಗಿ ಸಹಿಸಿಕೊಂಡಿರುವೆ, ನನ್ನ ಸಹನೆ ಬಲಹೀನತೆ ಅಲ್ಲ, ಇದೇ ರೀತಿ ಮುಂದುವರೆದರೆ ನನ್ನ ರಾಜಕಾರಣ ಸಹ ದೊಡ್ಡದಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು, ದೇವರು ಅವರಿಗೆ ಸದ್ಭುದ್ಧಿ ನೀಡಲಿ ಎಂದರು.
ನಗರದಲ್ಲಿ ಕರೆಯದಿದ್ದರೂ ಪ್ರಚಾರ:
ನಗರದಲ್ಲಿ ಪ್ರಚಾರಕ್ಕೆ ಕರೆದಿಲ್ಲ, ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರಕ್ಕೆ ಕರೆದಿಲ್ಲ, ಆದರೆ ಸ್ವಯಂ ಪ್ರೇರಿತವಾಗಿ ನಾನೇ ಪ್ರಚಾರ ಮಾಡುತ್ತಿದ್ದೇನೆ, ಅವರು ಹೇಳಿದರೂ ಸಹ ನಾನು ಪ್ರಚಾರ ಮಾಡುವೆ, ಹೇಳದಿದ್ದರೂ ಪ್ರಚಾರ ಮಾಡುವೆ ಎಂದರು.
ಇನ್ನು ಈಗಷ್ಟೇ ಜೆಡಿಎಸ್‌ಗೆ ಪುನ: ಸೇರ್ಪಡೆಯಾಗಿರುವ ಅಭ್ಯರ್ಥಿ ಗಣವೇಷದಲ್ಲಿ ಪಥಸಂಚಲನ ನಡೆಸಿದ್ದಾರೆ, ನಮ್ಮ ಪಕ್ಷದವರೇ ಇವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ, ಅವರನ್ನು ನಿಲ್ಲಿಸುತ್ತಿರುವವರು ಯಾರು ಎಂಬುದು ಗೊತ್ತಿದೆ, ನನ್ನನ್ನು ಅಡ್ಡಗಾಲು,
ಎಐಎಂಎಐಎಂ ಬಿಜೆಪಿ, ಜನತಾ ದಳ ಒಳಒಪ್ಪಂದ ಮಾಡಿಕೊಂಡಿವೆ, ವಿಜಯಪುರದ ಮೌಲಾನಾ ಒಬ್ಬರು ಎಐಎಂಎಐಂಗೆ ಹಾಕದಿದ್ದರೆ ಜೆಡಿಎಸ್‌ಗೆ ಮತ ಹಾಕಿ ಎಂದು ಸಂದೇಶ ರವಾನಿಸುತ್ತಿದ್ದಾರೆ, ನನ್ನ ವಿರುದ್ಧ ವ್ಯವಸ್ಥಿತವಾಗಿ ಷಡ್ಯಂತ್ರ ನಡೆಯುತ್ತಿದೆ ಎಂದರು.ಇನ್ನೂ ಜಾತ್ಯಾತೀತ ಜನತಾ ದಳ ಅಭ್ಯರ್ಥಿ ಮೂರನಾಲ್ಕು ಬಾರಿ ಜನತಾ ದಳದಿಂದ ಸ್ಪರ್ಧಿಸಿ ಎರಡು ವರ್ಷಗಳ ಹಿಂದೆ ಬಿ. ಜೆ. ಪಿ. ಟೀಕೇಟ ಆಕಾಂಕ್ಷಿಯಾಗಿದ್ದವರು, ಬಿ. ಜೆ.ಪಿ. ಸೇರಿದ ಬಳಿಕ ಆರ್. ಎಸ್. ಎಸ್. ಉಡುಪಿನಲ್ಲಿರುವ. ಅವರ ಪೋಟೊ ಸಹಿತ ನನ್ನ ಬಳಿ ಇವೆ ಇವರೆಂಥಾ ಜಾತ್ಯಾತೀತರು ಇವರಿಗೆ ಟಿಕೇಟ್ ನೀಡಿದ ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು ಎಂದರು.