ಹಿರೇಮಸಳಿಯಲ್ಲಿ ಬಸವೇಶ್ವರ ಜಯಂತಿ ಆಚರಣೆ, ಹೇಗಿತ್ತು ಗೊತ್ತಾ ಭವ್ಯ ಮೆರವಣಿಗೆ?
ಸರಕಾರ ನ್ಯೂಸ್ ಇಂಡಿ
ವಿಶ್ವಕ್ಕೆ ಮೊದಲ ಸಂಸತ್ತು ಪರಿಚಯಿಸಿದ, ಮಾನವ ಹಕ್ಕುಗಳ ರಕ್ಷಣೆ ಕುರಿತು ಪ್ರತಿಪಾದನೆ ಮಾಡಿದ, ಕಾಯಕ, ದಾಸೋಹ ಮತ್ತು ಸಮಾನತೆ ಮೂಲಕ ಮಹತ್ತರ ಕ್ರಾಂತಿಗೈದ ವಿಶ್ವ ಗುರು ಖ್ಯಾತಿಯ ಮಹಾತ್ಮ ಬಸವೇಶ್ವರರ ಜಯಂತಿಯನ್ನು ಹಿರೇಮಸಳಿಯಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಗ್ರಾಮದ ಮಹಾತ್ಮ ಬಸವೇಶ್ವರ ವೃತ್ತದಲ್ಲಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿದ ಯುವ ಜನತೆ ಬಳಿಕ ಎತ್ತಿನ ಬಂಡಿಯಲ್ಲಿ ಭವ್ಯ ಮೆರವಣಿಗೆ ನಡೆಸಿದರು. ಡೊಳ್ಳು ಕುಣಿತ, ನೃತ್ಯ ವೈಭವಗಳು ಗಮನ ಸೆಳೆದರು. ಮಾರ್ಗದುದ್ದಕ್ಕೂ ಬಸವೇಶ್ವರರ ವಚನ ಸಂದೇಶ ಮೊಳಗಿದವು. ವಿದ್ಯಾರ್ಥಿಗಳು ಬಸವಣ್ಣನವರ ಕುರಿತು ಜಯಘೋಷ ಹಾಕಿದರು.
ಎಂಎಲ್‌ಸಿ ಸುನೀಲಗೌಡರಿಗೆ ಜೀವ ಬೆದರಿಕೆ, ಕಾರು ಅಡ್ಡಗಟ್ಟಿ ಆವಾಜ್ ಹಾಕಿದ್ದು ವಿಜುಗೌಡರ ಅನುಯಾಯಿಯಾ?
ಗ್ರಾಮದ ಎಲ್ಲ ಸಮಾಜ ಬಾಂಧವರು ಮಹಾತ್ಮ ಬಸವೇಶ್ವರರಿಗೆ ನಮಿಸಿದರು. ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವೇಶ್ವರರ ತತ್ವ ಸಂದೇಶಗಳನ್ನು ಪ್ರಚುರಪಡಿಸಲಾಯಿತಲ್ಲದೇ ಮಕ್ಕಳಿಗೆ ವಚನಸಾರದ ಅರಿವು ಮೂಡಿಸಲಾಯಿತು.
ಮುಖಂಡರಾದ ಮಲ್ಲೇಶಿಗೌಡ ಪಾಟೀಲ, ಅಶೋಕ ಹಂಜಗಿ, ಅದೃಶ್ಯಪ್ಪ ವಾಲಿ, ಶಿವಾನಂದ ಕ್ಷತ್ರಿ, ಭೋಜು ಚಾಂದಕವಠೆ, ಬಸು ಹಂಜಗಿ, ಶಿವಾನಂದ ಮಾದನಶೆಟ್ಟಿ, ಈರಪ್ಪ ಹಂಜಗಿ ಮತ್ತಿತರರಿದ್ದರು.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)