ಆಟವಾಡುತ್ತಾ ಮನೆಯಿಂದ ಹೋಗಿದ್ದ ಮಕ್ಕಳು ಶವವಾಗಿ ಪತ್ತೆ ! ಅಯ್ಯೋ…ಹೇಗಾಯ್ತು? ಏನಾಯ್ತು?
ಸರಕಾರ ನ್ಯೂಸ್ ವಿಜಯಪುರ
ಆಟವಾಡುತ್ತಾ ಮನೆಯಿಂದ ಹೊರಗಡೆ ಹೋಗಿದ್ದ ಮಕ್ಕಳು ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ !!!
ಗಚ್ಚಿನಕಟ್ಟಿ ಕಾಲನಿಯ ಮಿಹೀರ್ ಶ್ರೀಕಾಂತ ಜಾನಗೌಳಿ(7), ಅನುಷ್ಕಾ ಅನೀಲ ದಹಿಂಡೆ(10) ಹಾಗೂ ವಿಜಯ ಅನೀಲ ದಹಿಂಡೆ (7) ಮೃತ ಮಕ್ಕಳು.
ಇಲ್ಲಿನ ಇಂಡಿ ರಸ್ತೆಯಲ್ಲಿರುವ ನೀರಿನ ಹೊಂಡದಲ್ಲಿ ಮಕ್ಕಳ ಶವ ಪತ್ತೆಯಾಗಿದೆ.
ಭಾನುವಾರ ಆಟವಾಡುತ್ತಾ ಮನೆಯಿಂದ ಹೊರಬಿದ್ದಿದ್ದ ಮಕ್ಕಳು ಮರಳಿ ಮನೆಗೆ ಬಂದಿರಲಿಲ್ಲ. ಎಲ್ಲೆಡೆ ಹುಡುಕಾಡಿ ಸ್ಥಳೀಯ ಎಪಿಎಂಸಿ ಠಾಣೆಗೆ ಪಾಲಕರು ದೂರು ನೀಡಿದ್ದರು. ಸಿಸಿಟಿವಿಗಳನ್ನು ಪರಿಶೀಲಿಸಲಾಗಿ ಮಕ್ಕಳು ಆಟವಾಡುತ್ತಾ ಹೋಗಿರುವುದು ಕಂಡು ಬಂದಿತ್ತು. ಇದೀಗ ಮಕ್ಕಳು ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಶವ ತೆಗೆಯುವ ಕಾರ್ಯಾಚರಣೆ ನಡೆಸಿದ್ದಾರೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)