ಸ್ಟೇರಿಂಗ್ ಕಟ್ ಆಗಿ ಲಾರಿ ಪಲ್ಟಿ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು
ಸರಕಾರ್ ನ್ಯೂಸ್ ಚಡಚಣ
ಚಲಿಸುತ್ತಿದ್ದ ಲಾರಿಯ ಸ್ಟೇರಿಂಗ್ ಕಟ್ ಆಗಿರುವ ಪರಿಣಾಮ ಲಾರಿ ಪಲ್ಟಿಯಾಗಿರುವ ಘಟನೆ ಚಡಚಣ ತಾಲೂಕಿನ ಧೂಳಖೇಡ ಬಳಿ ಶನಿವಾರ ನಡೆದಿದೆ.
ಇಲ್ಲಿನ ಸಾಗರ ಹೋಟೆಲ್ ಬಳಿ ಲಾರಿ ಪಲ್ಟಿಯಾಗಿದ್ದು, ಡ್ರೈವರ್ ವಿಕಾಸ (40) ಗಾಯಗೊಂಡಿದ್ದಾರೆ. ಅಪಘಾತಕ್ಕೆ ಸ್ಟೇರಿಂಗ್ ಕಟ್ ಆಗಿರುವುದೇ ಕಾರಣ. ವೇಗವಾಗಿ ಚಲಿಸುತ್ತಿದ್ದಾಗ ಸ್ಟೇರಿಂಗ್ ಕಟ್ ಆಗಿದ್ದರಿಂದ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಮಾಡಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)