ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ, ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ
ಸರಕಾರ್ ನ್ಯೂಸ್ ವಿವಿಜಯಪುರ
ಅಪ್ರಾಪ್ತೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ವಿಶೇಷ ಪೊಕ್ಸೊ ನ್ಯಾಯಾಲಯ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂ.ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಸ್ಥಳೀಯ ನಿವಾಸಿ ಸಾಧಿಕ ಅಲಿಯಾಸ್ ರಜಾಕ ಸಲೀಮ್ ಇನಾಮದಾರ ಶಿಕ್ಷೆಗೆ ಗುರಿಯಾಗಿದ್ದಾನೆ. ಈತನೊಂದಿಗೆ ಇನ್ನೂ ಇಬ್ಬರು ಆರೋಪಿಗಳಿದ್ದು ಅವರು ಬಾಲಾಪರಾಧಿಗಳಾಗಿದ್ದಾರೆ.
ಈ ಮೂವರು ಸೇರಿ 2020 ಮಾ.3 ರಂದು ಗೋಳಗುಮ್ಮಟದ ಎದುರಿಗಿರುವ ಷಣ್ಮುಖಸ್ವಾಮಿ ಮಠದ ಮಹಾದ್ವಾರದ ಮುಂದೆ ನಡೆದು ಗೆಳತಿಯ ಮನೆಗೆ ಹೋಗುತ್ತಿದ್ದ ಬಾಲಕಿಯನ್ನು ಅಡ್ಡಗಟ್ಟಿದ್ದಾರೆ. ಅಲ್ಲದೇ ಎಲ್ಲಿಗೆ ಹೋಗುತ್ತಿರುವೆ ಎಂದು ಕೇಳಲಾಗಿ ಬಾಲಕಿ ತನ್ನ ಸ್ನೇಹಿತೆಯ ಮನೆಗೆ ಎಂದಿದ್ದಾಳೆ. ಮುಂದೆ ಪೊಲೀಸರಿದ್ದು ಕರೊನಾ ಹಿನ್ನೆಲೆ ಯಾರಿಗೂ ಹೊರಗಡೆ ತಿರುಗಾಡಲು ಬಿಡುತ್ತಿಲ್ಲ. ಹೀಗಾಗಿ ಬೈಕ್ ಮೇಲೆ ಬಿಡುತ್ತೇವೆಂದು ಸಾಧಿಕನ ಮನೆಗೆ ಕರೆದೊಯ್ದಿದ್ದರು. ಅಲ್ಲಿ ರಾತ್ರಿಯಿಡೀ ಒಬ್ಬರಾದ ಮೇಲೆ ಒಬ್ಬರು ಲೈಂಗಿಕ ಹಲ್ಲೆ ನಡೆಸಿದ್ದರು. ಈ ಬಗ್ಗೆ ಬಾಲಕಿ ತಂದೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಮ ನಾಯಿಕ ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ವಿ.ಜಿ. ಹಗರಗುಂಡ ವಾದ ಮಂಡಿಸಿದ್ದರು.