ಹೋಟೆಲ್ ಗೆ ನುಗ್ಗಿದ ಕಾರು, ಕೂದಲೆಳೆ ಅಂತರದಲ್ಲೇ ಅಪಾಯದಿಂದ ಪಾರು !
ಸರಕಾರ್ ನ್ಯೂಸ್ ಬಬಲೇಶ್ವರ
ಕುಡಿದ ನಶೆಯಲ್ಲಿ ರಸ್ತೆ ಬದಿಯ ಹೋಟೆಲ್‌ಗಳಿಗೆ ಕಾರು ನುಗ್ಗಿದ ಪರಿಣಾಮ ಐದಕ್ಕೂ ಅಧಿಕ ಹೋಟೆಲ್‌ಗಳ ಪೀಠೋಪಕರಣಗಳ ಹಾನಿಯಾಗಿರುವ ಘಟನೆ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಇದ್ದಕ್ಕಿದ್ದಂತೆ ಹೋಟೆಲ್‌ಗೆ ನುಗ್ಗಿದ KA28 M 9169 ನಂಬರ್ ನ ಮಹೀಂದ್ರಾ ಕಾರು ಭಾರಿ ಅವಘಡ ಸೃಷ್ಟಿಸಿತು.
ಈ ವೇಳೆಯಲ್ಲಿ ಹೋಟೆಲ್‌ನಲ್ಲಿ ಮಲಗಿದ್ದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ವಿಠ್ಠಲ ಗೂಗ್ಯಾಳ್ ಎಂಬುವರಿಗೆ ಸೇರಿದ ಕಾರಿನಿಂದ ಈ ಅವಘಡ ಸಂಭವಿಸಿದೆ. ಡ್ರೈವರ್‌ನನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.