ಮಹಿಳೆಗೆ ಲೈಂಗಿಕ ಕಿರುಕುಳ, ನಾಲ್ವರಿಂದ ಹಲ್ಲೆ, ಎಲ್ಲಿ? ಹೇಗಾಯಿತು?
ಸರಕಾರ್ ನ್ಯೂಸ್ ಮನಗೂಳಿ
ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ರಾತ್ರಿ ಒಬ್ಬಳೇ ಮನೆಯಲ್ಲಿದ್ದಾಗ ನಾಲ್ವರು ಸೇರಿ ಹಲ್ಲೆ ನಡೆಸಿದ ಪ್ರಕರಣ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಶಶಿಕಲಾ ಶ್ರೀಶೈಲ ಪುರಾಣಿಕಮಠ (24) ಎಂಬುವರ ಮೇಲೆ ಈ ಕೃತ್ಯ ನಡೆದಿದೆ. ಅ. 27ರಂದೇ ಈ ಘಟನೆ ನಡೆದಿದ್ದು, ಚಿಕಿತ್ಸೆ ಪಡೆದು ಬಂದ ಶಶಿಕಲಾ ಇದೀಗ ಹಿರಿಯರನ್ನುವಿಚಾರಿಸಿಕೊಂಡು ಬಂದು ನ.9ರಂದು ದೂರು ನೀಡಿದ್ದಾರೆ.
ಅದೇ ಗ್ರಾಮದ ರಾಕೇಶ ಮಲ್ಲಯ್ಯ ಪುರಾಣಿಕಮಠ, ಶಕುಂತಲಾ ಮಲ್ಲಯ್ಯ ಪುರಾಣಿಕಮಠ, ಬುಡ್ಡಿಮಾ ಭಾಗವಾನ, ಚಂದವ್ವ ಕೌಲಗಿ ಎಂಬುವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಅ.27ರಂದು ರಾತ್ರಿ 9ರ ಸುಮಾರಿಗೆ ಶಶಿಕಲಾ ಒಬ್ಬಳೇ ಮನೆಯಲ್ಲಿದ್ದಾಗ ಆರೋಪಿತರೆಲ್ಲರೂ ಸೇರಿ ಮನೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಹಲ್ಲೆ ನಡೆಸಿದ್ದಾರೆ. ಅಸ್ವಸ್ಥಗೊಂಡ ಶಶಿಕಲಾ ಬ.ಬಾಗೇವಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಪ್ರಕರಣ ದಾಖಲಿಸಿದ್ದಾರೆ.