ರಾಜ್ಯ

ಬಡವರ ಅನ್ನಕ್ಕೂ ಕನ್ನ, ಅನ್ನಭಾಗ್ಯ ಅಕ್ಕಿ ಅಕ್ರಮ‌ ಮಾರಾಟ, ದಂಗು ಬಡಿಸುತ್ತದೆ ಮೂರು ವರ್ಷದ ದಾಖಲೆ !

ಬೆಂಗಳೂರು: ಬಡವರು, ದೀನ-ದಲಿತರು ಹಸಿವಿನಿಂದ ಬಳಲಬಾರದೆಂಬ ಕಾರಣಕ್ಕೆ ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆಗೆ ಕನ್ನ ಹಾಕುವ ಖದೀಮರ ಸಂಖ್ಯೆ ಹೆಚ್ಚಿದೆ !
ಕಳೆದ ಮೂರು ವರ್ಷದ ಪ್ರಕರಣಗಳು, ವಶಪಡಿಸಿಕೊಂಡ ಪಡಿತರ ವಿವರಗಳನ್ನು ಕೇಳಿದರೆ ಖಂಡಿತ ಶಾಕ್ ಆಗಲಿದೆ. ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ರಾಜ್ಯದಲ್ಲಿ 1060 ಪ್ರಕರಣಗಳು ದಾಖಲಾಗಿವೆ.
ಅಕ್ರಮವಾಗಿ ಪಡಿತರ ಆಹಾರ ಧಾನ್ಯಗಳನ್ನು ಸಾಗಾಣಿಕೆ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ 1518 ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ.
ಅಕ್ರಮವಾಗಿ ಪಡಿತರ ಆಹಾರ ಧಾನ್ಯಗಳನ್ನು ಸಾಗಾಣಿಕೆ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಒಟ್ಟು 1060 ಪ್ರಕರಣಗಳಲ್ಲಿ ಒಟ್ಟು 105857.74 ಕ್ವಿಂಟಾಲ್ ಅಕ್ಕಿ, 1573.10 ಕ್ವಿಂಟಾಲ್ ಗೋಧಿ, 982.24 ಲೀಟರ್ ಲೀಟರ್ ರಾಗಿ, 9.30 ಲೀಟರ್ ಲಿಟರ್ ಲಿಟರ್, 9.30 ಲೀಟರ್ ಲಿ. ಅಂದ ಹಾಗೆ ಇವುಗಳ ಮೌಲ್ಯ ಎಷ್ಟು ಗೊತ್ತಾ? ಅಂದಾಜು 23,29,95,831 ರೂಪಾಯಿ ಎಂದರೆ ಅಚ್ಚರಿಯಾಗಿರಬೇಕಲ್ಲವೇ?

error: Content is protected !!