ರಾಜ್ಯ

ಮಾನವ ಕಳ್ಳ ಸಾಗಾಣಿಕೆ, ಐದು ವರ್ಷದಲ್ಲಿ 763 ಪ್ರಕರಣ ಪತ್ತೆ, 772 ಆರೋಪಿಗಳ ಬಂಧನ, ಶಿಕ್ಷೆಯಾಗಿದ್ದು ಮಾತ್ರ ಎಷ್ಟು ಜನರಿಗೆ ಗೊತ್ತಾ?

ಬೆಂಗಳೂರು: ರಾಜ್ಯದಲ್ಲಿಮಾನವ ಕಳ್ಳ ಸಾಗಾಣಿಕೆ ಪ್ರಕರಣ ತೀವ್ರ ಭೀತಿ ಸೃಷ್ಟಿಸಿದೆ. ಬೆಳಗ್ಗೆ ಕೆಲಸಕ್ಕೆ ಹೋದ ಮಡದಿ, ಮಕ್ಕಳು ಸಂಜೆ ಮನೆಗೆ ಬಂದರೆ ಅದೇ ದೊಡ್ಡ ಪುಣ್ಯ ಎನ್ನುವಂತಾಗಿದೆ. ಇಂಥ ಮಾನವ ಕಳ್ಳ ಸಾಗಾಣಿಕೆ ಬೇಧಿಸುವಲ್ಲಿ ಪೊಲೀಸರು ಸಫಲರಾಗಿದ್ದೇನೋ ನಿಜ. ಆದರೆ, ಆರೋಪಿಗಳಿಗೆ ಎಷ್ಟರ ಮಟ್ಟಿಗೆ ಶಿಕ್ಷೆಯಾಗಿದೆ ಎಂಬುದೇ ಯಕ್ಷ ಪ್ರಶ್ನೆ.

ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 763 ಪ್ರಕರಣ ಮಾನವ ಕಳ್ಳಸಾಗಾಣಿಕೆ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 772 ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಇದರಲ್ಲಿ ಶಿಕ್ಷೆಯಾಗಿದ್ದು ಕೇವಲ 10 ಜನರಿಗೆ ಮಾತ್ರ.

2017ರಲ್ಲಿ 178 ಪ್ರಕರಣಗಳು ದಾಖಲಾಗಿದ್ದು 222 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ 10 ಜನರಿಗೆ ಮಾತ್ರ ಶಿಕ್ಷೆಯಾಗಿದೆ. 2018ರಲ್ಲಿ 146 ಪ್ರಕರಣ, 185 ಆರೋಪಿಗಳ ಬಂಧನ, 2018ರಲ್ಲಿ 146 ಪ್ರಕರಣಗಳಲ್ಲಿ 185 ಆರೋಪಿಗಳು, 2019ರಲ್ಲಿ 155 ಪ್ರಕರಣಗಳಲ್ಲಿ 190 ಆರೋಪಿಗಳನ್ನು, 2020ರಲ್ಲಿ 119 ಮಾನವ ಕಳ್ಳಸಾಗಾಣಿಕೆ ಪ್ರಕರಣದಲ್ಲಿ 136 ಆರೋಪಿಗಳನ್ನು2021ರಲ್ಲಿ 134 ಪ್ರಕರಣಗಳಲ್ಲಿ 205 ಆರೋಪಿಗಳು ಹಾಗೂ 2022 ಫೆಬ್ರವರಿಯೊಳಗೆ 31 ಪ್ರಕರಣಗಳಲ್ಲಿ 34 ಆರೋಪಿಗಳನ್ನು ಬಂದಿಸಲಾಗಿದೆ. ಆದರೆ, ಈವರೆಗೂ ಒಬ್ಬರಿಗೂ ಶಿಕ್ಷೆಯಾಗಿಲ್ಲ.

ರಾಜ್ಯದಲ್ಲಿ ಮಾನವ ಕಳ್ಳಸಾಗಾಣಿಕೆ ತಡೆಗಟ್ಟಲುರಾಜ್ಯ ಸಿಐಡಿ ಘಟಕದಲ್ಲಿ ಆಂಟಿ ಹೂಮನ್‌ ಟ್ರಾಫಿಕಿಂಗ್‌ ಸೆಲ್‌ ಸ್ಥಾಪಿಸಲಾಗಿದೆ. ಎಡಿಜಿಪಿ ಮಟ್ಟದ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ. ಇವರ ಅಧೀನದಲ್ಲಿ ಹಲವು ಅಧಿಕಾರಿಗಳನ್ನು ನೇಮಿಸಲಾಗಿದೆ. ರಾಜ್ಯದಲ್ಲಿ 30 ಮಾನವ ಕಳ್ಳಸಾಗಾಣಿಕೆ ನಿಷೇಧ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಆದರೂ, ಪ್ರಕರಣಗಳ ಮಾತ್ರ ನಿಂತಿಲ್ಲ.

error: Content is protected !!