ವಿಜಯಪುರ

ಡಾ.ಅಂಬೇಡ್ಕರ್‌ ಮೂರ್ತಿ ಅನಾವರಣ ವೇಳೆ ಅಗ್ನಿ ಅವಘಡ, ಮಲಘಾಣದಲ್ಲಿ ಘಟನೆ, ಕ್ಷಣಾರ್ಧದಲ್ಲಿ ಬೆಂಕಿ ನಂದಿಸಿದ ಯುವಕರು….

ವಿಜಯಪುರ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್‌ ಮೂರ್ತಿ ಅನಾವರಣ ವೇಳೆ ಅಗ್ನಿ ಅವಘಡವೊಂದು ಸಂಭವಿಸಿದೆ !

ಮಾಜಿ ಮುಖ್ಯಮಂತ್ರಿ ಸಿದ್ದರಾಮ್ಯ ಹಾಗೂ ಇತರ ಮುಖಂಡರಿಂದ ಮೂರ್ತಿ ಅನಾವರಣಗೊಳಿಸುವ ಕಾಯಕ್ರಮದಲ್ಲಿಈ ಘಟನೆ ನಡೆದಿದೆ. ಶನಿವಾರ ಮೂರ್ತಿ ಅನಾವರಣಗೊಳಿಸುವಾಗ ಸಂಘಟಕರು ಪಟಾಕಿ ಸಿಡಿಸಿದ್ದಾರೆ. ಅದರ ಕಿಡಿ ಮೂರ್ತಿ ಪಕ್ಕದ ಹೂವಿನ ತೊಟ್ಟಿಗೆ ಹೊತ್ತಿಕೊಂಡಿತು. ಕೂಡಲೇ ಯುವಕರು ಬೆಂಕಿ ನಂದಿಸಿದರು.

ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಸಂವಿಧಾನ ಉಳಿವಿಗಾಗಿ ಜಾತ್ಯತೀತ ಶಕ್ತಿಗಳ ಬೃಹತ್‌ ಜನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

error: Content is protected !!