ಭೀಮೆಯಲ್ಲಿ ತಂದೆಯ ಹತ್ಯೆಗೈದ ಪಾಪಿ ಮಗ
ವಿಜಯಪುರ: ಆಸ್ತಿಗಾಗಿ ಹೆತ್ತ ತಂದೆಯನ್ನೆ ಪಾಪಿ ಮಗನೋರ್ವ ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಿಕ್ಕಮನೂರ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಣ್ ಮ್ಯಾಗೇರಿ 65 ಸಾವು. ಇನ್ನು
ಪ್ರಕಾಶ್ ಮ್ಯಾಗೇರಿ (33) ಕೊಲೆಗೈದಿರುವ ಪಾಪಿ ಮಗ. ಆಸ್ತಿ ನೀಡುವಂತೆ ತಂದೆಯನ್ನು ಮಗ ಪೀಡಿಸುತ್ತಿದ್ದ ಎನ್ನಲಾಗಿದೆ. ಆಸ್ತಿ ನೀಡದ ಕಾರಣ ತಂದೆಗೆ ಕೊಡಲಿಯಿಂದ ಹೊಡೆದು ಕೊಲೆಗಿದ್ದಾನೆ. ಪ್ರಕಾಶ್ ಮ್ಯಾಗೇರಿನ್ನು ಪೊಲೀಸರು ವಶಕ್ಕೆ ಪಡೆದುಕೊಂಡು, ಮುಂದಿನ ಕಾನೂನು ಕ್ರಮಕೈಗೊಂಡಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.