ವಿಶೇಷ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ, ಯಾರು ಅರ್ಜಿ ಸಲ್ಲಿಸಬಹುದು?
ಸರಕಾರ್ ನ್ಯೂಸ್ ವಿಜಯಪುರ
ಜಿಲ್ಲೆಯ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಬಿ.ಎಡ್ ಮತ್ತು ಡಿ,ಎಡ್ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನಕ್ಕಾಗಿ 2022-23ನೇ ಸಾಲಿನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಲು National Concil for Teacher Education Department of State Educational Research and Training ಹಾಗೂ ಮಾನ್ಯತೆ ಪಡೆದಿರುವ ಬಿ.ಎಡ್ ಹಾಗೂ ಡಿ.ಎಡ್ ಸರ್ಕಾರಿ,ಅರೆಸರ್ಕಾರಿ, ಖಾಸಗಿ ಕಾಲೇಜುಗಳಲ್ಲಿ 2022-23ನೇ ಸಾಲಿಗೆ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಜೈನ್, ಸಿಖ್, ಬೌದ್ಧ ಹಾಗೂ ಪಾರ್ಸಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಇಪ್ಪತೈದು ಸಾವಿರ ರೂ.ಗಳಂತೆ ಗರಿಷ್ಟ 2 ವರ್ಷಕ್ಕೆ ಮಾತ್ರ ವಿಶೇಷ ಪ್ರೋತ್ಸಾಹಧನ ನೀಡಲಾಗುವುದು.
ಅರ್ಹ ಆಭ್ಯರ್ಥಿಗಳು ಅರ್ಜಿ ಸಲ್ಲಿಸಲು 10-12-2022ರಂದು ಕೊನೆಯ ದಿನವಾಗಿದ್ದು, ಸೇವಾ ಸಿಂಧು ಪೋರ್ಟಲ್‍ನಲ್ಲಿ (http;//sevasindhu,Karnataka,gov.in) ವೆಬ್ ಸೈಟ್ ಮೂಲಕ ಅಗತ್ಯ ದಾಖಲಾತಿಗಳೊಂದಿಗೆ ಹಾರ್ಡ್ ಪ್ರತಿಯನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನ್ ಅಜಾದ್ ಭವನ ಜಿಲ್ಲಾ ವಿಜ್ಞಾನ ಚಟುವಟಿಕೆ ಕೇಂದ್ರದ ಹತ್ತಿರ ಜಿಲ್ಲಾ ಪಂಚಾಯತ ರಸ್ತೆ, ಕನಕದಾಸ ಬಡಾವಣೆÉ ದೂ.ಸಂ 08352-295523 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.