ನಮ್ಮ ವಿಜಯಪುರ

ಬಾಲ ಭವನ ವಶದಲ್ಲಿರುವ ಜಾಗೆ ಅತಿಕ್ರಮಣ, ಸಿಇಒ ರಾಹುಲ್‌ ಶಿಂಧೆ ನೀಡಿದ ಖಡಕ್‌ ವಾರ್ನಿಂಗ್‌ ಏನು ಗೊತ್ತಾ?

ಸರಕಾರ್‌ ನ್ಯೂಸ್‌ ವಿಜಯಪುರ

ಜಿಲ್ಲಾ ಬಾಲ ಭವನದ ವಶದಲ್ಲಿರುವ ಜಾಗೆಯನ್ನು ಸಾರ್ವಜನಿಕರು ಅತಿಕ್ರಮಣ ಮಾಡಿಕೊಂಡಿರುವ ಅಂಶ ಆಧರಿಸಿ ಜಿಪಂ ಸಿಇಒ ರಾಹುಲ್‌ ಶಿಂಧೆ ಸ್ಥಳ ಪರಿಶೀಲನೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಖಡಕ್‌ ಸಂದೇಶ ರವಾನಿಸಿದರು.

ಇಲ್ಲಿನ ಜಿಲ್ಲಾ ಬಾಲ ಭವನ ಕಚೇರಿಗೆ ಸೋಮವಾರ ಭೇಟಿ ನೀಡಿದ ಅವರು, ಬಾಲ ಭವನ ಕಚೇರಿಯ ವ್ಯಾಪ್ತಿಯಲ್ಲಿರುವ ಸರ್ವೇ ನಂಬರ್ 313ರ ಜಾಗೆಯನ್ನು ಭೂ ದಾಖಲೆಗಳ ಇಲಾಖೆಯಿಂದ ಸಮೀಕ್ಷೆ ಮಾಡಿಸಿ, ಬಾಲ ಭವನದ ಸುತ್ತಲೂ ತಂತಿ ಬೇಲಿ ಹಾಕುವಂತೆಯೂ ಬಾಲಭವನಕ್ಕೆ ಸುತ್ತಲೂ ಕಂಪೌಂಡ್ ನಿರ್ಮಾಣ ಮಾಡುವಂತೆ ಬಾಲ ಭವನದ ಅಧಿಕಾರಿಗಳಿಗೆ ಸೂಚಿಸಿದರು.

ಬಾಲ ಭವನದ ಒಳಾಂಗಣ ಹಾಗೂ ಹೊರಾಂಗಣ ಆವರಣದ ಪರಿಶೀಲನೆ ನಡೆಸಿ, ಬಾಲ ಭವನದ ಆವರಣದಲ್ಲಿ ಮಕ್ಕಳು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆಟಗಳನ್ನು ಆಡಲು ಆಟದ ಮೈದಾನ ನಿರ್ಮಾಣ ಮಾಡುವಂತೆ ಅಧಿಕಾರಿಗಳು ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ. ಚವ್ಹಾಣ, ವಿಜಯಪುರ ಗ್ರಾಮೀಣ ವಿಭಾಗದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಸಿ ಮ್ಯಾಗೇರಿ , ವಿಜಯಪುರ ಜಿಲ್ಲಾ ಬಾಲ ಭವನದ ಸಂಯೋಜಕಿ ಗೀತಾ ಬುಳ್ಳಾ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ವಿಜಯಕುಮಾರ ಚವ್ಹಾಣ ಹಾಗೂ ಇತರರು ಉಪಸ್ಥಿತರಿದ್ದರು.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!