ನಮ್ಮ ವಿಜಯಪುರ

ಮಗಳ ಸಾವಿಗೆ ಪ್ರತಿಕಾರ, ಕೊಲೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಸರಕಾರ್ ನ್ಯೂಸ್ ವಿಜಯಪುರ

ಮಗಳು ಸಾವಿಗೀಡಾದ ಕಾರಣಕ್ಕ ಆಕ್ರೋಶಗೊಂಡ ಕುಟುಂಬಸ್ಥರು ಅಂತ್ಯಸಂಸ್ಕಾರದ ವೇಳೆ ಆಕೆಯ ಗಂಡನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರತೀರ್ಪು ಪ್ರಕಟಿಸಿದೆ.

ಖಿಲಾರಹಟ್ಟಿ ಗ್ರಾಮದ ನಾಗು ಬಾಬು ಪಾಂಡ್ರೆ, ರಾವುಬಾ ಬಾಬು ಪಾಂಡ್ರೆ, ದಶರಥ ನಾಗು ಪಾಂಡ್ರೆ, ರೇವಣಸಿದ್ದ ದಶರಥ ಪಾಂಡ್ರೆ, ಶಿವಾಜಿ ವಿಠಲ ಪಾಂಡ್ರೆ, ಬಾಜೀರಾವ ನಾಮದೇವ ಪಾಂಡ್ರೆ, ಮಾಯಪ್ಪ ಸೊಮಾ ಪಾಂಡ್ರೆ ಶಿಕ್ಷೆಗೆ ಗುರಿಯಾಗಿದ್ದಾರೆ.

ಮಹಾರಾಷ್ಟ್ರದ ಪಡಿಲ್ ಕ್ಯಾಂಟೀನ್ ಪಟ್ಟಣದಲ್ಲಿ ದುಡಿಯಲು ಹೋಗಿದ್ದಾಗ ಕಾಜಲ್ ರಾಜು ತಾಂಬೆ ಇವರು ಮೈಮೇಲೆ ಡಿಸೇಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಳು. ಆಸ್ಪತ್ರೆಯಲ್ಲಿ ಚಿಕಿತ್ಸೆ ಹೊಂದುವಾಗಿ ಮರಣ ಹೊಂದಿದ್ದಳು. ಅಂತ್ಯಕ್ರಿಯೆಗೆ ಖಿಲಾರಹಟ್ಟಿಗೆ ತಂದಾಗ ನಾಗು ಬಾಬು ಪಾಂಡ್ರೆ ಸೇರಿದಂತೆ ಏಳು ಜನ ಸೇರಿ ಕಾಜಲ್ ಗಂಡ ರಾಜು ತಾಂಬೆ ಮೇಲೆ ಹಲ್ಲೆ ನಡೆಸಿದ್ದು, ರಾಜು ಸ್ಥಳದಲ್ಲಿಯೇ ಸಾವಿಗೀಡಾಗಿದ್ದನು. ಸಂಜಯ ತಾಂಬೆ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸತೀಶ ಎಲ್‌ಪಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 2,41,500 ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ವಿ.ಎಸ್. ಇಟಗಿ ವಾದ ಮಂಡಿಸಿದ್ದರು.

error: Content is protected !!