ಬಳ್ಳಾರಿ

ಬಳ್ಳಾರಿಯಲ್ಲಿ ಬಿಜೆಪಿ ಎಸ್ ಟಿ ಸಮಾವೇಶ, ಸಿದ್ದತೆ ಪರಿಶೀಲಿಸಿದ ಶ್ರೀರಾಮುಲು, ಹೇಗಿದೆ ತಯಾರಿ?

ಸರಕಾರ್ ನ್ಯೂಸ್ ಬಳ್ಳಾರಿ

ವಿಧಾನ ಸಭೆ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸಿರುವ ಬಿಜೆಪಿ ನ.20 ರಂದು ಬಳ್ಳಾರಿಯಲ್ಲಿ ಪರಿಶಿಷ್ಟ ಪಂಗಡದ ಬೃಹತ್ ಸಮಾವೇಶ ಹಮ್ಮಿಕೊಂಡಿದೆ.

ಈಗಾಗಲೇ ಕಲಬುರಗಿಯಲ್ಲಿ ರಾಜ್ಯ ಮಟ್ಟದ ಒಬಿಸಿ ಸಮಾವೇಶ ಹಮ್ಮಿಕೊಂಡು ಆ ಸಮುದಾಯದ ಮತ ಸೆಳೆಯುವ ಕಸರತ್ತು ನಡೆಸಿದ್ದ ಬಿಜೆಪಿ ಇದೀಗ ಪರಿಶಿಷ್ಟ ಪಂಗಡದ ಸಮಾವೇಶ ಹಮ್ಮಿಕೊಂಡಿದೆ.

ಬಳ್ಳಾರಿಯಲ್ಲಿ ನ. 20 ರಂದು ನಡೆಯಲಿರುವ ಪರಿಶಿಷ್ಟ ಪಂಗಡದ ಸಮಾವೇಶಕ್ಕೆ ಸಕಲ ಸಿದ್ದತೆ ಕೈಗೊಳ್ಳಾಗಿದೆ.
ಸಚಿವ ಶ್ರೀರಾಮುಲು ಸಮಾವೇಶದ ನೇತೃತ್ವವಹಿಸಿದ್ದು ಕಳೆದೊಂದು ವಾರದಿಂದ ಸರಣಿ ಸಭೆ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆ, ಪಕ್ಷದ ಕಾರ್ಯಕರ್ತರು ಹಾಗೂ ವಿವಿಧ ಸಮುದಾಯಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ‌.

ಸಮಾವೇಶದ ವಿಶೇಷತೆ:
ಎಸ್ ಸಿ ಹಾಗೂ ಹಾಗೂ ಎಸ್ ಟಿ ಮೀಸಲಾತಿ ಹೆಚ್ಚಳ ಮತ್ತು ತಳವಾರ- ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿದ್ದು ಈ ಬಾರಿ ಬಳ್ಳಾರಿ ಸಮಾವೇಶದ ಮೂಲಕ ಆ ಸಂದೇಶ ಪುನರುಚ್ಚರಿಸಲಾಗುತ್ತಿದೆ.

ಪರಿಶಿಷ್ಟ ಪಂಗಡಕ್ಕೆ ಶೇ. 3 ರಷ್ಟಿದ್ದ ಮೀಸಲಾತಿಯನ್ನು ಶೇ. 7 ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೇ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ತಳವಾರ ಸಮುದಾಯಕ್ಕೆ ಎಸ್ ಟಿ ಪ್ರಮಾಣ ಪತ್ರ ನೀಡಿದ್ದರಿಂದ ಆ ಸಮುದಾಯದ ಜನ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಲಿದ್ದಾರೆ. ವಿಧಾನ ಸಭೆ ಚುನಾವಣೆಯಲ್ಲಿ ಇದರ ಲಾಭ ಪಡೆಯಲು ಬಿಜೆಪಿ ಸಜ್ಜಾಗಿದೆ.
ಒಟ್ಟಿನಲ್ಲಿ ಬಳ್ಳಾರಿಯ ಎಸ್ ಟಿ ಸಮಾವೇಶಕ್ಕೆ ದಿನಗಣನೆ ಆರಂಭಗೊಂಡಿರುವ ಬೆನ್ನಲ್ಲೇ ಬಿಜೆಪಿಯಲ್ಲಿ ಸಂಚಲನ ಹೆಚ್ಚಿಸಿದೆ.

error: Content is protected !!