Uncategorizedಬಳ್ಳಾರಿ

ಬಳ್ಳಾರಿಯಲ್ಲಿ ಭಾರತ ಜೋಡೋ ಪಾದಯಾತ್ರೆ, ರಾಹುಲ್ ಗೆ ಮಲ್ಲಿಕಾರ್ಜುನ ಖರ್ಗೆ ಸಾಥ್

ಸರಕಾರ್ ನ್ಯೂಸ್ ಬಳ್ಳಾರಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ ಜೋಡೋ ಪಾದಯಾತ್ರೆಗೆ ಭಾರಿ ಜನ ಬೆಂಬಲ ವ್ಯಕ್ತವಾಗುತ್ತಿದ್ದು, ಶನಿವಾರ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹ ಭಾಗಿಯಾಗುವ ಮೂಲಕ ಯಾತ್ರೆಗೆ ಮೆರಗು ತಂದರು.

ರಾಹುಲ್ ಗಾಂಧಿ ಅವರ ಪಾದಯಾತ್ರೆಯಲ್ಲಿ ಲಕ್ಷ ಲಕ್ಷ ಜ‌ನ ಪಾಲ್ಗೊಳ್ಳುತ್ತಿದ್ದಾರೆ. ಆ ಮೂಲಕ ದೇಶಕ್ಕೆ ಒಳ್ಳೆಯ ಸಂದೇಶ ರವಾನಿಸುತ್ತಿದ್ದಾರೆ. ಆಡಳಿತ ಪಕ್ಷದ ಸುಳ್ಳು, ದ್ವೇಷ ರಾಜಕಾರಣದ ಬಗ್ಗೆ ಅಸಮಾಧಾನ ಹೊಂದಿರುವ ಜನತೆ ರಾಹುಲ್ ಗಾಂಧಿಯ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಸೂಕ್ತ ಸಂದೇಶ ರವಾನಿಸುತ್ತಿದ್ದಾರೆ. ನಾನೂ ಸಹ ಯಾತ್ರೆಗೆ ಕೈಜೋಡಿಸಿದ್ದು ಇದೊಂದು ಮಹತ್ವದ ಯಾತ್ರೆ ಎಂದು ಖರ್ಗೆ ಟ್ವೀಟ್ ಮೂಲಕ ತಿಳಿಸಿದರು.

error: Content is protected !!