Uncategorized

ಭಾರತ ಮುಸ್ಲಿಂ ರಾಷ್ಟ್ರ ಮಾಡುವ ಹುನ್ನಾರ, ನಾಸಿರ್‌ಹುಸೇನ್‌ಗೆ ಪ್ರಮಾಣ ವಚನ ಬೋಧನೆ ಬೇಡ ಎಂದ ಶಾಸಕ ಯತ್ನಾಳ ಬಿಚ್ಚಿಟ್ಟ ರಹಸ್ಯವೇನು ಗೊತ್ತಾ?

ಸರಕಾರ ನ್ಯೂಸ್ ವಿಜಯಪುರ

ಪಾಕಿಸ್ತಾನ್ ಪರ ಘೋಷಣೆ ಹಾಗೂ ರಾಜಧಾನಿಯಲ್ಲಿ ಬಾಂಬ್ ಸ್ಪೋಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳ್ಳುವವರೆಗೂ ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್‌ಗೆ ಪ್ರಮಾಣ ವಚನ ಸ್ವೀಕಾರಕ್ಕೆ ಅವಕಾಶ ಕಲ್ಪಿಸಬಾರದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ.

ಘೋಷಣೆ ಕೂಗಿದ ವ್ಯಕ್ತಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರ ಜೊತೆಗೆ ನಿಕಟ ಸಂಬಂಧ ಹೊಂದಿದ್ದಾನೆ. ನಾಸಿರ್‌ಹುಸೇನ್ ಗಮನಕ್ಕೆ ಇಲ್ಲದೇ ಪಾಕಿಸ್ತಾನ್ ಪರ ಘೋಷಣೆ ಕೂಗಲು ಹೇಗೆ ಸಾಧ್ಯ? ಇದರಲ್ಲಿ ನಾಸೀರ್ ಹುಸೇನ್ ಪಾತ್ರವೂ ಇರುವುದು ಕಂಡು ಬರುತ್ತಿದೆ. ಹೀಗಾಗಿ ರಾಷ್ಟ್ರಪತಿಗಳು ನಾಸೀರ್‌ಹುಸೇನ್‌ಗೆ ಪ್ರಮಾಣ ವಚನ ಬೋಧಿಸಬಾರದೆಂದು ಈಗಾಗಲೇ ದೇಶಭಕ್ತ ನಿವೃತ್ತ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಪತ್ರ ಬರೆದಿದ್ದಾರೆ. ನಾನೂ ಸಹ ಮನವಿ ಮಾಡುವೆ ಎಂದು ಶುಕ್ರವಾರ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.

ದೇಶದಲ್ಲಿ ಅಸುರಕ್ಷತೆ, ಅಭದ್ರತೆ ಉಂಟು ಮಾಡುವ ಸಂಚು ನಡೆದಿದೆ. 2047ಕ್ಕೆ ಭಾರತ ಇಸ್ಲಾಂ ರಾಷ್ಟ್ರ ಮಾಡುವ ಉದ್ದೇಶದಿಂದ ಇಂಥ ಅಶಾಂತಿ ಹರಡುತ್ತಿದ್ದಾರೆ. ಕರ್ನಾಟಕದಲ್ಲಿ ಆದ ಬೆಳವಣಿಗೆ ರಾಜ್ಯ ಸರ್ಕಾರದ ಮುಸ್ಲಿಂ ತುಷ್ಠೀಕರಣದ ಫಲ. ಇದರಿಂದ ಅವರಿಗೆ ಮತ್ತಷ್ಟು ಸ್ವಾತಂತ್ರೃ ಸಿಕ್ಕಂತಾಗಲಿದೆ. ಕೇವಲ ಒಂದು ಕೋಮಿಗೆ 10 ಸಾವಿರ ಕೋಟಿ, ವಕ್ಫ್ ಆಸ್ತಿ ರಕ್ಷಣೆಗೆ 100 ಕೋಟಿ ಕೊಡುವುದಾಗಿ ಸಿದ್ದರಾಮಯ್ಯ ಹೇಳುತ್ತಾರೆ. ಹಿಂದು ಧಾರ್ಮಿಕ ಸಂಸ್ಥೆಯಿಂದ ಬರುವ ಹಣ ಅನ್ಯರಿಗೆ ಕೊಡಲಾಗುತ್ತಿದ್ದು ಅದು ನಿಲ್ಲಬೇಕೆಂದರು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಮಾತನಾಡಿರುವೆ. ಯಾವುದೇ ಕಾರಣಕ್ಕೂ ಲೋಕಸಭೆಗೆ ಸ್ಪರ್ಧಿಸಲ್ಲ ಎಂದಿರುವೆ. ಕರ್ನಾಟಕದ ಪ್ರಚಾರ ಜವಾಬ್ದಾರಿ ಕೊಡಿ, ಎಲ್ಲ ಕ್ಷೇತ್ರವನ್ನು ಗೆಲ್ಲಿಸುವ ಭರವಸೆ ಕೊಟ್ಟಿದ್ದೇನೆ ಎಂದರು.

ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವರ ವಿರುದ್ಧ ಹರಿಹಾಯ್ದ ಯತ್ನಾಳ, ಲೋಕಸಭೆ ಬಳಿಕ ನಿಮ್ಮ ಸರ್ಕಾರವೇ ಇರಲ್ಲ. ಆಗ ನಿಮ್ಮ ಹಿಂದು ವಿರೋಧಿ ಪಠ್ಯ ತೆಗೆದು ಹಾಕಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗುವುದು ಎಂದರು.

error: Content is protected !!