ಬೆಂಕಿ ಜ್ವಾಲೆಗೆ ಹೊತ್ತಿ ಉರಿದ ಕಾರು, ಒಳಗಿದ್ದವರು ಜಸ್ಟ್ ಮಿಸ್….!!! ಅಬ್ಬಬ್ಬಾ ಏನಿದು ಅನಾಹುತ?
ಸರಕಾರ ನ್ಯೂಸ್ ಚಡಚಣ
ವೇಗವಾಗಿ ಚಲಿಸುತ್ತಿದ್ದ ಕಾರ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣ ಮಾತ್ರದಲ್ಲಿಯೇ ತನ್ನ ಕೆನ್ನಾಲಿಗೆ ಚಾಚಿದ ಅಗ್ನಿ ಜ್ವಾಲೆಗೆ ಕಾರ್ ಸುಟ್ಟು ಕರಕಲಾಗಿದೆ.
ಚಡಚಣ ಪಟ್ಟಣದ ಝಳಕಿ ಮತ್ತು ಬಳ್ಳೊಳಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕಾರ್ ನಲ್ಲಿದ್ದ ಇಬ್ಬರು ಅದೃಷ್ಟವಶಾತ್ ಪಾರಾಗಿದ್ದಾರೆ.
ವಿಜಯಪುರ- ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಡ್ರೈವರ್ ಹಾಗೂ ಓರ್ವ ಕಾರಿನಿಂದ ಇಳಿದು ಜೀವ ಕಾಪಾಡಿಕೊಂಡಿದ್ದಾರೆ.
ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಚಡಚಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)