ಜೇವರಗಿ -ಸಿಂದಗಿ ಬಸ್‌ನಲ್ಲಿ ಕಳ್ಳತನ, ಕಳುವಾದ ಚಿನ್ನಾಭರಣದ ಮೌಲ್ಯ ಕೇಳಿದರೆ ಬೆಚ್ಚಿ ಬೀಳೋದು ಗ್ಯಾರಂಟಿ
ಸರಕಾರ ನ್ಯೂಸ್ ಸಿಂದಗಿ
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಸೌಕರ್ಯದ ಯೋಜನೆಯಿಂದಾಗಿ ಮಹಿಳೆಯರ ಪ್ರಯಾಣದ ಪ್ರಮಾಣ ಹೆಚ್ಚಾಗಿದ್ದು, ಅದೇ ತೆರನಾಗಿ ಕಳ್ಳತನ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ.
ಇದಕ್ಕೆ ಪೂರಕವೆಂಬಂತೆ ಸಿಂದಗಿ ಜೆವರಗಿ ಬಸ್‌ನಲ್ಲಿ ಮಹಿಳೆಯೊಬ್ಬಳು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 7.80 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳುವಾಗಿದ್ದು, ಕಂಗಾಲಾದ ಮಹಿಳೆ ಸಿಂದಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಏನಿದು ಪ್ರಕರಣ?
ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದ ಕಾವೇರಿ ನಿಂಗರಾಜ ಚುಂಚೂರು ಎಂಬುವರು ತಮ್ಮ ತಾಯಿ ಲಕ್ಷ್ಮಿ ಅಮೃತ ಕಂಚಿ ಎಂಬುವರ ಜೊತೆಗೂಡಿ ಶಹಾಪುರದಿಂದ ಜೇವರಗಿ ಹೋಗಿದ್ದಾರೆ. ಅಲ್ಲಿ ಸಂಬಂಧಿಕರ ಮನೆಗೆ ಭೇಟಿ ನೀಡಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಜೇವರಗಿಯಿಂದ ಸಿಂದಗಿಗೆ ಬರುವ ಬಸ್‌ಗೆ ಹತ್ತಿದ್ದಾರೆ. ಬ್ಯಾಗ್‌ನಲ್ಲಿ 2.40 ಲಕ್ಷ ರೂ.ಮೌಲ್ಯದ 4 ತೊಲಾ ಚಿನ್ನದ ಸರ, 2.40 ಲಕ್ಷ ರೂ.ಮೌಲ್ಯದ 4 ತೊಲಾ ಜೋಡಿ ಚಿನ್ನದ ಜೋಡಿ ಬಿಲ್ವಾರ್, 1.50 ಲಕ್ಷ ರೂ.ಮೌಲ್ಯದ 2.5 ತೊಲಾ ಲಾಕೇಟ್, 90 ಸಾವಿರ ರೂ.ಮೌಲ್ಯದ ಚಿನ್ನದ ಉಂಗುರ, 60 ಸಾವಿರ ರೂ.ಮೌಲಯದ ಚಿನ್ನದ ಜುಮುಕಿ ಹೋಗಿ ಒಟ್ಟು 7.80 ಲಕ್ಷ ರೂ.ಮೌಲ್ಯದ ಚಿನ್ನದ ಆಭರಣಗಳಿದ್ದವು.
ಕೆಇಬಿಗೆ ಮೊಸಳೆಯನ್ನೇ ಹೊತ್ತು ತಂದ ರೈತರು…ಕಾರಣ ಕೇಳಿದರೆ ಬೆಚ್ಚಿ ಬೀಳೋದು ಗ್ಯಾರಂಟಿ…!
ಮೋರಟಗಿಗೆ ಬಸ್ ಬಂದಾಗ ಸಾಕಷ್ಟು ಜನ ಹತ್ತಿಳಿದರು. ಅಲ್ಲಿಂದ ಸಿಂದಗಿ ಬಸ್ ನಿಲ್ದಾಣಕ್ಕೆ ಬಂದಿಳಿದು ಮನೆಗೆ ಹೋಗಿದ್ದು, ಅಲ್ಲಿ ಬ್ಯಾಗ್ ತೆಗೆದು ನೋಡಲಾಗಿ ಚಿನ್ನಾಭರಣ ಕಳುವಾಗಿದ್ದವು. ಆತಂಕಗೊಂಡ ಕಾವೇರಿ ಸಿಂದಗಿ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)