ಸಿಡಿಲಿನ ಆರ್ಭಟಕ್ಕೆ 10 ಕುರಿಗಳ ಸಾವು, ಅಯ್ಯಯ್ಯೋ ಏನಿದು ಸಿಡಿಲಿನ ಅವಾಂತರ?
ಸರಕಾರ ನ್ಯೂಸ್ ವಿಜಯಪುರ
ಬಿಸಿಲೂರಿನಲ್ಲಿ ಕಳೆದೊಂದು ತಿಂಗಳಲ್ಲಿ ಹಲವು ಬಾರಿ ಸಿಡಿಲು ಅಪ್ಪಳಿಸಿದ್ದು ಜೀವ ಹಾನಿ ಸಂಭವಿಸುತ್ತಲೇ ಇದೆ !
ಮನುಷ್ಯರು, ಜಾನುವಾರು ಸಾವಿಗೀಡಾದರೆ ಮರಗಳು ಸಹ ಸಿಡಿಲಿನ ಹೊಡೆತಕ್ಕೆ ಧಗಧಗಿಸಿವೆ.
ಇದೀಗ ಬುಧವಾರ ಮತ್ತೊಂದು ಅವಘಢ ಸಂಭವಿಸಿದ್ದು ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ಹತ್ತು ಕುರಿಗಳು ಅಸುನೀಗಿವೆ.
ಸುಬ್ಬರಾಯ ನಾಟೀಕಾರ ಎಂಬುವರ 10 ಕುರಿಗಳು ಮೃತಪಟ್ಟಿವೆ. ಜಮೀನಿನಲ್ಲಿ ಕುರಿಗಳು ಮೇಯಲು ಹೋದಾಗ ಸಿಡಿಲು ಬಡಿದು ಮೃತಪಟ್ಟಿವೆ. ದೇವರಹಿಪ್ಪರಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)