ಚುನಾವಣೆ ಕರ್ತವ್ಯನಿರತ ಪೇದೆ ಸಾವು, ಆರೋಗ್ಯದಲ್ಲಿ ಏರುಪೇರು, ಮುಂದೆ ಆಗಿದ್ದು ಅನಾಹುತ !
ಸರಕಾರ ನ್ಯೂಸ್ ವಿಜಯಪುರ
ಚುನಾವಣೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪೇದೆಯೋರ್ವ ಅನಾರೋಗ್ಯಕ್ಕೀಡಾಗಿ ಅಸುನೀಗಿದ್ದಾರೆ.
ಕೊಲ್ಹಾರ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ರಾಹಿಂಸಾಬ ದಾವಲ್ ಸಾಬ ಅವಟಿ (44) ಮೃತಪಟ್ಟಿದ್ದಾರೆ.
ಆರೋಗ್ಯದಲ್ಲಿ ಏರು-ಪೇರಾಗಿದ್ದರಿಂದ ಚಿಕಿತ್ಸೆ ಫಲಿಸದೇ ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.
ಸಿಡಿಲು ಬಡಿದು ಹತ್ತು ಕುರಿ- ಎತ್ತು ಸಾವು….ಅಯ್ಯಯ್ಯೋ ಏನಿದು ಸಾವಿನ ಸರಣಿ?
ಇವರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಕೊಲ್ಹಾರ ಠಾಣೆ ವ್ಯಾಪ್ತಿಯಲ್ಲಿ ಫ್ಲಾಯಿಂಗ್ ಸ್ಕ್ವಾಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕೊಲ್ಹಾರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಾರ್ವಜನಿಕರು ಹಾಗೂ ಅಧಿಕಾರಿ ವರ್ಗ ಸಂತಾಪ ವ್ಯಕ್ತಪಡಿಸಿದ್ದಾರೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)