ನಮ್ಮ ವಿಜಯಪುರ

ಸಿಡಿಲು ಬಡಿದು ಹತ್ತು ಕುರಿ- ಎತ್ತು ಸಾವು….ಅಯ್ಯಯ್ಯೋ ಏನಿದು ಸಾವಿನ ಸರಣಿ?

ಸರಕಾರ ನ್ಯೂಸ್ ವಿಜಯಪುರ

ಬಿಸಿಲೂರಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಸಿಡಿಲಾರ್ಭಟಕ್ಕೆ ಸಾಕಷ್ಟು ಜೀವ ಹಾನಿಯಾಗುತ್ತಿದೆ !

ಸತತ ಮೂರು ದಿನಗಳ ಕಾಲ ಸುರಿದ ಧಾರಾಕಾರ ಮಳೆ ಹಲವು ಅವಘಡಗಳಿಗೆ ಕಾರಣವಾಗಿದ್ದು, ಸಿಡಿಲಿಗೆ ಜೀವ ಹಾನಿಯಾಗುತ್ತಲೇ ಇದೆ. ಮೊದಲೆರಡು ದಿನ ಸಿಡಿಲಿಗೆ ಮೂವರು ಬಲಿಯಾಗಿದ್ದು, ಎಮ್ಮೆ ಕೂಡ ಸಾವಿಗಿತ್ತು. ಶನಿವಾರ ಮತ್ತೆ ಸುರಿದ ಮಳೆಯಿಂದಾಗಿ ಸಿಡಿಲು ಬಡಿದು ಹತ್ತು ಕುರಿ ಹಾಗೂ ಎತ್ತು ಅಸುನೀಗಿವೆ.

ದೇವರಿಗೆ ನೈವೇದ್ಯ ನೀಡಲು ಹೋದಾಗ ಬಡಿದ ಸಿಡಿಲು, ಮಹಿಳೆ ಸಾವು !!!!

ಸಾರವಾಡ ಗ್ರಾಮದ ಸುನಂದ ಮಲ್ಲಿಕಾರ್ಜುನ ಗಂಗನಹಳ್ಳಿ ಎಂಬುವರ ಜಮೀನಿನಲ್ಲಿ ಮಧ್ಯಾಹ್ನ 2 ರ ಸುಮಾರಿಗೆ ಸಿಡಿಲು ಬಡಿದಿದೆ. ಇಟ್ಟಂಗಿಹಾಳದ ವಿಲಾಸ ರಾಘು ದೊಂಬಾಳೆ ಎಂಬುವರ ಹತ್ತು ಕುರಿಗಳು ಸಾವಿಗೀಡಾಗಿವೆ. ಬಬಲೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದೆ.

ಸಿಡಿಲಾರ್ಭಟಕ್ಕೆ ಬಲಿಯಾದವರಿಗೆ ಪರಿಹಾರ ಕೋರಿ ಸಿಎಂ ಗೆ ಪತ್ರ, ಶಾಸಕ ಯಶವಂತರಾಯಗೌಡ ರ ಪತ್ರದಲ್ಲೇನಿದೆ ಗೊತ್ತಾ?

ಇನ್ನು ಇಂಡಿ ತಾಲೂಕಿನ ಲಾಳಸಂಗಿ ಗ್ರಾಮದಲ್ಲಿ ಅಲ್ಲಾಭಕ್ಷ ಎಂಬುವರ ಎತ್ತು ಸಹ ಸಿಡಿಲಿಗೆ ಬಲಿಯಾಗಿದೆ. ಜಿಲ್ಲೆಯಲ್ಲಿ ಮಳೆ ವಾತಾವರಣ ಮುಂದುವರಿಯಲಿದ್ದು, ಯಾವುದಕ್ಕೂ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕೆಂಬುದು ಸರಕಾರ ನ್ಯೂಸ್ ಕಳಕಳಿ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!