ನಮ್ಮ ವಿಜಯಪುರ

ದೇವರಿಗೆ ಹೊರಟಿದ್ದ ವೇಳೆ ಅಪಘಾತ, ಕಾರ್ ನಲ್ಲಿ ನಾಲ್ವರು ಸಾವು, ಮೃತರ ವಿವರ ಗೊತ್ತಾ?

ಸರಕಾರ ನ್ಯೂಸ್ ಬಬಲೇಶ್ವರ

ಬಬಲೇಶ್ವರ ತಾಲೂಕಿನ ಅರ್ಜುಣಗಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತರಾದ ನಾಲ್ವರು ವಿಜಯಪುರ ಮೂಲದವರೆಂದು ತಿಳಿದು ಬಂದಿದೆ.

ಮೃತರಾದವರು ಅರ್ಜುನ ಕುಶಾಲಸಿಂಗ್ ರಜಪೂತ (32), ರವಿನಾಥ ಸುನಿಲಾಲ್ ಪತ್ತಾರ ( 52 ), ಪುಷ್ಟಾ ರವಿನಾಥ ಪತ್ತಾರ ( 40),
ಮೇಘರಾಜ ಅರ್ಜುನಸಿಂಗ್ ರಜಪೂತ
(12) ಎಂದು ತಿಳಿದು ಬಂದಿದೆ.

ಭೀಕರ ಅಪಘಾತ,‌ ನಾಲ್ವರದ ದುರ್ಮರಣ, ಅಬ್ಬಬ್ಬಾ…ಇದೇನ್ ಅನಾಹುತ?

ವಿಜಯಪುರದಿಂದ ಜಮಖಂಡಿಯ ದೇವಸ್ಥಾನಕ್ಕೆ KA 28 D 1021 ನಂಬರಿನ ಕಾರಿನಲ್ಲಿ ತೆರಳುತ್ತಿದ್ದಾಗ
ಜಮಖಂಡಿಯಿಂದ ಸಿಮೆಂಟ್ ಲೋಡ್ ಇದ್ದ KA 16 B 6472 ನಂಬರಿನ ಲಾರಿ ವಿಜಯಪುರದತ್ತ ಬರುತ್ತಿದ್ದ ವೇಳೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಪರಿಣಾಮ ಕಾರಿನಲ್ಲಿದ್ದ ಈ ನಾಲ್ವರೂ ಸ್ಥದಲ್ಲಿಯೇ ಅಸುನೀಗಿದ್ದಾರೆ. ಸ್ಥಳಕ್ಕೆ ಬಬಲೇಶ್ವರ ಪೊಲೀಸರು ಹಾಗೂ ಎಸ್ ಪಿ ಋಷಿಕೇಶ ಸೋನಾವಣೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ದೇವರಿಗೆ ನೈವೇದ್ಯ ನೀಡಲು ಹೋದಾಗ ಬಡಿದ ಸಿಡಿಲು, ಮಹಿಳೆ ಸಾವು !!!!

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಮಾಡಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!