ಸಿಡಿಲು ಬಡಿದು ಆಕಳ ಸಾವು, ಮುಂಗಾರು ಪೂರ್ವ ಮಳೆಗೆ ಹಾನಿ !!!
ಸರಕಾರ ನ್ಯೂಸ್ ಇಂಡಿ
ಭೀಕರ ಬರ ಹಾಗೂ ರಣಬಿಸಿಲಿನಿಂದ ಬಚಾವಾದ ಬೆನ್ನಲ್ಲೇ ಮುಂಗಾರು ಪೂರ್ವ ಮಳೆ ಜೋರಾಗಿದ್ದು, ಸಿಡಿಲಿನ ಹೊಡೆತಕ್ಕೆ ಜೀವ ಹಾನಿಯಾಗುತ್ತಿವೆ.
ಸೋಮವಾರ ನಸುಕಿನ ಜಾವದಿಂದ ಆರಂಭವಾದ ಮಳೆಯಿಂದಾಗಿ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಸಿಡಿಲು ಬಡಿದು ಆಕಳೊಂದು ಅಸುನೀಗಿದೆ.
ಗ್ರಾಮದ ಶಿವಯೋಗಿ ಭೀಮಶ್ಯಾ ಹೊಸಮನಿ ಎಂಬುವರ ಆಕಳು ಸಾವಿಗಿಡಾಗಿದ್ದು, ರೈತ ಕಣ್ಣೀರಾಗಿದ್ದಾನೆ. ಬೆಳ್ಳಂಬೆಳಗ್ಗೆ ಬಡಿದ ಸಿಡುಲು ರೈತನ ಬದುಕು ಕಸಿದುಕೊಂಡಿದೆ. ಹೀಗಾಗಿ ಸರ್ಕಾರ ತ್ವರಿತವಾಗಿ ಪರಿಹಾರ ನೀಡಿ ರೈತನ ನೆರವಿಗೆ ಧಾವಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)