ವಿಜಯಪುರ

ತಳವಾರ ಸಮುದಾಯಕ್ಕೆ ಅನ್ಯಾಯ, ರಾಜ್ಯದ ವಿವಿಧೆಡೆ ಪ್ರತಿಭಟನೆ, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ….!

ಬೆಂಗಳೂರ: ತಳವಾರ  ಸಮುದಾಯಕ್ಕೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರ ಕೊಡದಿದ್ದರೆ ಉಗ್ರಹೋರಾಟ ಕೈಗೊಳ್ಳುವುದರ ಜೊತೆಗೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಾನೂನಾತ್ಮಕ ಹೋರಾಟ ಮುಂದುವರಿಸುವುದಾಗಿ ಸಮಾಜದ ಮುಖಂಡರು ಎಚ್ಚರಿಸಿದ್ದಾರೆ.

ಬೆಳಗಾವಿಯ ಅಥಣಿ, ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಮತ್ತಿತರ ಭಾಗಗಳಲ್ಲಿ ತಹಸೀಲ್ದಾರ್‌ ಕಚೇರಿಗೆ ಮನವಿ ಸಲ್ಲಿಸಿರುವ ಸಮುದಾಯದ ಮುಖಂಡರು, ಸರ್ಕಾರದ ಅಧೇಶಾನುಸಾರ ಕೂಡಲೇ ಜಾತಿ ಪ್ರಮಾಣ ಪತ್ರ ನೀಡಬೇಕು. ಇಲ್ಲವಾದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ದೇವರಹಿಪ್ಪರಗಿಯಲ್ಲಿ ಮುಖಂಡ ಸಾಯಬಣ್ಣಬಾಗೇವಾಡಿ ಮಾತನಾಡಿ, ಸರ್ಕಾರದ ಆದೇಶ ಅನುಸಾರ ಸಂವಿಧಾನಬದ್ಧವಾಗಿ ಕಾನೂನು ಅಡಿಯಲ್ಲಿ ಪರಿಶೀಲನೆ ಮಾಡಿ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರವನ್ನು ತಳವಾರ ಜನಾಂಗಕ್ಕೆ ವಿತರಿಸಿ ಇಲ್ಲವಾದರೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಗೆಜೆಟ್ ಸಂಖ್ಯೆ-ಸಿ.ಜಿ.-ಡಿ.ಎಲ್.-ಇ-2003, 2020,-218817 ದಿನಾಂಕ:20-03-2020 ರಂದು ಸರಕಾರದ ಆದೇಶದ ಪ್ರಕಾರ.

  1. A) in entry 38 for the words nayaka,nayaka,the words and brakets “nayikada, nayaka (inclusind pariwar and talawar shall be subtittued ಎಂದು ಭಾರತ ಸರ್ಕಾರದ ಆದೇಶವಿದ್ದರೂ ಈ ಮೇಲಿನ ಎಲ್ಲಾ ಅಂಶಗಳನ್ನು ಕೂಲಂಕುಶವಾಗಿ ಪರಿಶೀಲಿಸದೆ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡುವಂತೆ ಸರ್ಕಾರದ ಸ್ಪಷ್ಟ ಆದೇಶ ಮತ್ತು ನಿರ್ದೇಶನವಿದ್ದರೂ ಸಂಬಂಧಿಸಿದ ತಹಸೀಲ್ದಾರ್‌ರು ದಾಖಲೆಯನ್ನು ಪರಿಶೀಲಿಸದೆ, ಸ್ಥಳ ಪರಿಶೀಲನೆ ನಡೆಸದೆ ಕಚೇರಿಯಲ್ಲಿ ಕುಳಿತುಕೊಂಡು ಸಕಾರಣ ನೀಡದೆ ಅರ್ಜಿ ತಿರಸ್ಕರಿಸುತ್ತಿದ್ದಾರೆ. ಇದೊಂದು ಬೇಜವಾಬ್ದಾರಿಯುತವಾಗಿ ವರ್ತಿಸುವುದು, ಕಾನೂನಿನ ವಿರುದ್ಧವಾಗಿ ನಡೆದುಕೊಳ್ಳುವುದು, ಅರ್ಜಿಗಳನ್ನು ದುರುದ್ದೇಶಪೂರ್ವಕವಾಗಿ ತಿರಸ್ಕರಿಸುವ ಕೃತ್ಯವಾಗಿದೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಶೋಷಿತ ಪರವಾಗಿದ್ದೇವೆ ಎಂದು ಸಬ್ ಕಾ ಸಾಥ್, ಸಬ್‌ ಕಾ ವಿಕಾಸ್, ಸಬ್‌ ಕಾ ವಿಶ್ವಾಸದೊಂದಿಗೆ ಶೋಷಿತ ವರ್ಗಗಳ ಸಬಲೀಕರಣಕ್ಕಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆಗಳು ತಲುಪಬೇಕು ಎಂಬುದು ಸರ್ಕಾರದ ಗುರಿಯಾಗಿದೆ. ಆದರೆ ತಳವಾರ ಸಮುದಾಯಕ್ಕೆ ಯಾವುದೇ ವಿಕಾಸ ಇಲ್ಲದೆ ಅನ್ಯಾಯ ಮಾಡುತ್ತಿರುವುದು ಯಾವ ನ್ಯಾಯ? ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದಲ್ಲಿ ತಳವಾರ ಮತ್ತು ಪರಿವಾರ ಎಂಬುದು ನಾಯಕ ಮತ್ತು ನಾಯಕ್ಡ ಪದಗಳ ಪರ್ಯಾಯ ಪದ ಎಂದು ಪರಿಗಣಿಸಬೇಕೆಂದು ಸ್ಪಷ್ಟವಾಗಿ ತಿಳಿಸಲಾಗಿದೆ ಆದರೂ ಅಧಿಕಾರಿಗಳು ತಳವಾರ ಮತ್ತು ಪರಿವಾರ ಎಂಬುದು ನಾಯಕ ಮತ್ತು ನಾಯಕ್ಡ ಸಮುದಾಯದಿಂದ ಪ್ರತ್ಯೇಕಿಸಿ ನೋಡುವ ಕುತಂತ್ರ ಮಾಡುತ್ತಿದ್ದಾರೆ. ಸರ್ಕಾರದ ಆದೇಶ ಅನುಸಾರ ತಳವಾರ ಮತ್ತು ಪರಿವಾರ ಎಂಬುದು ನಾಯಕ ಮತ್ತು ನಾಯಕ್ಡ ಸಮುದಾಯಗಳೇ ಆಗಿವೆ. ಪರ್ಯಾಯ ಪದ ಎಂದರೆ ಒಂದೇ ಎಂದರ್ಥವಲ್ಲವೇ? ಹಾಗಿದ್ದಮೇಲೆ ಪ್ರತ್ಯೇಕಿಸಿ ನೋಡುವ ಪ್ರಮೇಯ ಎಲ್ಲಿಯದು? ಇದೊಂದು ದುರುದ್ದೇಶ ನಡೆಯಲ್ಲದೇ ಮತ್ತೇನು? ತಳವಾರ ಮತ್ತು ಪರಿವಾರ ಎಂಬುವುದು ನಾಯಕ ಮತ್ತು ನಾಯಕ್ಡ ಸಮುದಾಯಕ್ಕೆ ಸೇರಿಲ್ಲವೆಂದು ಮೇಲೆ ಅದಕ್ಕೆ ಬೇಕಾದ ಪೂರಕ ದಾಖಲೆಗಳೆನ್ನಾದರೂ ಒದಗಿಸಬೇಕಲ್ಲವೇ? ತಳವಾರ ಸಮುದಾಯದವರು ಎಸ್ಟಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದಾಗ ನೀವು ಎಸ್ಟಿಗೆ ಅರ್ಹರಲ್ಲ ಎಂದು ಒಮ್ಮುಖವಾಗಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರಿಗಳು ಯಾವ ಪಂಗಡಕ್ಕೆ ಸೇರಿದೆ ಎಂಬುದನ್ನು ದಾಖಲೆ ಸಹಿತ ಸ್ಪಷ್ಟಪಡಿಸಬೇಕು ಇಲ್ಲವಾದಲ್ಲಿ ಈ ಬಗ್ಗೆ ಕ್ರಾಂತಿಕಾರಿ ಹೋರಾಟದ ಜೊತೆಗೆ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯೂ ವೈಯಕ್ತಿಕವಾಗಿ ನ್ಯಾಯಾಲಯದ ಮೊರೆ ಹೋಗುವುದರ ಜೊತೆಗೆ ದೂರು ದಾಖಲಿಸಬೇಕಾಗುತ್ತದೆ ಎಂದು ವಿನಮ್ರವಾಗಿ ತಿಳಿಸಲು ಬಯಸುತ್ತೇವೆ. ಅದಕ್ಕೂ ಮುನ್ನವೇ ಎಚ್ಚೆತ್ತುಕೊಂಡು ಜಾತಿ ಪ್ರಮಾಣ ಪತ್ರ ಒದಗಿಸಲು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಅಧಿಕಾಗಳಿಗೆ ಎಚ್ಚರಿಕೆಯನ್ನು ನಿಡಿದರು.

ಪ್ರತಿಭಟನೆಯಲ್ಲಿ ಪರಶುರಾಮ ನಾಟಿಕಾರ, ಚಂದು ಅಲ್ಲಾಪುರ, ರಾಜು ಕೊಂಡಗುಳಿ, ಮಲ್ಲು ಉತ್ನಾಳ, ರಾಜು ಮಣ್ಣೂರ ಬಸವರಾಜ ಯಲಗೋಡ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

error: Content is protected !!