ಸವದತ್ತಿ-ಬಾದಾಮಿ ಜಾತ್ರೆಗೆ ವಿಶೇಷ ಬಸ್, ಹೆಚ್ಚಿನ ಮಾಹಿತಿಗೆ ವರದಿ ನೋಡಿ, ಸದ್ಭಕ್ತರಿಗೆ ಶೇರ್ ಮಾಡಿ
ಸರಕಾರ್ ನ್ಯೂಸ್ ವಿಜಯಪುರ
ಪ್ರತಿ ವರ್ಷದಂತೆ ಈ ವರ್ಷವೂ ಏಪ್ರಿಲ್ 1ರಿಂದ 13ರವರೆಗೆ ಜರುಗುವ ಬೆಳಗಾವಿ ಜಿಲ್ಲೆಯ ಸವದತ್ತಿ ಶ್ರೀ ಯಲ್ಲಮ್ಮದೇವಿ ಹಾಗೂ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಶ್ರೀ ಬನಶಂಕರಿದೇವಿ ಜಾತ್ರೆ ಅಂಗವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ವಿಶೇಷ ಬಸ್‍ಗಳ ಕಾರ್ಯಾಚರಣೆ ಮಾಡಲಾಗುವುದು.
ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ವಿಜಯಪುರ ವಿಭಾಗದ ವಿಜಯಪುರ ಕೇಂದ್ರ ಬಸ್ ನಿಲ್ದಾಣ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟ, ಬಸವನಬಾಗೇವಾಡಿ ಹಾಗೂ ನಿಡಗುಂದಿ ಬಸ್ ನಿಲ್ದಾಣಗಳಿಂದ ವಿಶೇಷ ಬಸ್‍ಗಳ ಕಾರ್ಯಾಚರಣೆ ಮಾಡಲಾಗುವುದು.
ಪ್ರಯಾಣಿಕರು ಸಾರಿಗೆ ಸೌಲಭ್ಯ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ಸಾರಿಗೆ ಅಧಿಕಾರಿ ವಿಜಯಪುರ ಮೊ: 7760992252, ಘಟಕ ವ್ಯವಸ್ಥಾಪಕ ಘಟಕ-1 ಮೊ: 7760992263, ಘಟಕ-2 ಮೊ: 7760992264, ಇಂಡಿ ಘಟಕ ವ್ಯವಸ್ಥಾಪಕ ಮೊ: 7760992265, ಸಿಂದಗಿ ಮೊ: 7760992266, ಮುದ್ದೇಬಿಹಾಳ ಮೊ: 7760992267, ತಾಳಿಕೋಟೆ ಮೊ: 7760992268, ಬ.ಬಾಗೇವಾಡಿ ಮೊ: 7760992269, ಕೇಂದ್ರ ಬಸ್ ನಿಲ್ದಾಣ ನಿಲ್ದಾಣಾಧಿಕಾರಿ ಮೊ: 7760992258, ಕೇಂದ್ರ ಬಸ್ ನಿಲ್ದಾಣ ದೂ: 08352-251344 ಸಂಖ್ಯೆಗಳಿಗೆ ಸಂಪರ್ಕಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)