ನಮ್ಮ ವಿಜಯಪುರ

ವಿಜಯಪುರ ಬಸ್‌ ನಿಲ್ದಾಣದಲ್ಲಿ ಹೆಚ್ಚಿದ ಕಳ್ಳರ ಹಾವಳಿ, ನೂಕಾಟ-ತಳ್ಳಾಟದಲ್ಲಿ ಮೊಬೈಲ್‌ ಗಾಯಾಬ್‌ !

ಸರಕಾರ್‌ ನ್ಯೂಸ್‌ ವಿಜಯಪುರ

ಕಳೆದ ಹಲವು ದಿನಗಳಿಂದ ಬಸ್‌ ನಿಲ್ದಾಣದಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದು, ಈಗಾಗಲೇ ಚಿನ್ನಾಭರಣ ಕಳೆದುಕೊಂಡಿರುವ ಮಹಿಳೆಯರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಗರದ ಗಾಂಧಿ ಚೌಕ್‌ ಪೊಲೀಸ್‌ ಠಾಣೆಯಲ್ಲಿ ಕೆಲವು ಮಹಿಳೆಯರು ಪ್ರಕರಣ ದಾಖಲಿಸಿದ್ದು, ಬಸ್‌ ಹತ್ತುವಾಗ ತಳ್ಳಾಟ-ನೂಕಾಟ ಮಾಡಿ ಬ್ಯಾಗ್‌ ಮತ್ತು ಜೇಬಿನಲ್ಲಿದ್ದ ಬೆಲೆ ಬಾಳುವ ಸಾಮಗ್ರಿ ಕಳವು ಮಾಡುತ್ತಿದ್ದಾರೆ.

ಇದೀಗ ಅಂಥದ್ದೇ ಪ್ರಕರಣ ಮರುಕಳಿಸಿದ್ದು, ಮಂಗಳವಾರ ವಿಜಯಪುರ ಕೇಂದ್ರ ಬಸ್‌ ನಿಲ್ದಾಣದಲ್ಲಿ ಇಂಡಿಗೆ ಹೋಗಲೆಂದು ಬಸ್‌ ಹತ್ತುತ್ತಿದ್ದ ಇಬ್ಬರ ಮೊಬೈಲ್‌ ಕಳುವು ಮಾಡಲಾಗಿದೆ. ಗುಬ್ಬೇವಾಡ ಗ್ರಾಮದ ಸಿದ್ಧಾರ್ಥ ಯಾದವಾಡ ಹಾಗೂ ಹಿರೇಮಸಳಿ ಗ್ರಾಮದ ಪುಂಡಲೀಕ ಕಪಾಲಿ ಎಂಬುವವರ ಮೊಬೈಲ್‌ ಕಳುವಾಗಿದೆ. ವಿಜಯಪುರದಿಂದ ಇಂಡಿಗೆ ಹೊರಟಿದ್ದ ಬಸ್‌ನಲ್ಲಿ ಈ ಘಟನೆ ನಡೆದಿದೆ. ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಳ್ಳರ ಹೆಡೆಮುರಿ ಕಟ್ಟಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!