ಸುರಪುರದಲ್ಲಿ ಜನತಾ ಮನೆಯಲ್ಲಿದ್ದ ಕುರಿ ಕಳವು, ದೂರು ದಾಖಲಿಸಿದ ಕುರಿಗಾಹಿ
ಸರಕಾರ್ ನ್ಯೂಸ್ ಸುರಪುರ
ಜನತಾ ಮನೆಯಲ್ಲಿದ್ದ ಕುರಿ ಕಳವು ಮಾಡಿಕೊಂಡು ಹೋಗಿರುವ ಪ್ರಕರಣ ಶೋರಾಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಮೌನೇಶ ತಿಮ್ಮಣ್ಣ ಸುಬೇದಾರ ಎಂಬುವರ ನಾಲ್ಕು ಕುರಿಗಳು ಕಳುವಾಗಿದ್ದು, ಅವುಗಳ ಮೌಲ್ಯ 40 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.
ಡಿ. 3 ರಂದು ರಾತ್ರಿಯೇ ಈ ಘಟನೆ ನಡೆದಿದ್ದು ಇದೀಗ ಅಂದರೆ ಡಿ. 6ರಂದು ಮೌನೇಶ ಶೋರಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೌನೇಶನ ಕುಟುಂಬದಲ್ಲಿ ಒಟ್ಟು 70 ಕುರಿಗಳು ಇದ್ದು ಪ್ರತಿದಿನ ಕಾಯ್ದುಕೊಂಡು ಬಂದು ಜನತಾ ಮನೆಯಲ್ಲಿ ಬಿಡುತ್ತಿದ್ದನು. ಡಿ. 3 ರಂದು ಮಧ್ಯಾಹ್ನ ಮನೆಯ ಮುಂದೆ ಕಪ್ಪು ಬಣ್ಣದ ಸ್ಕಾರ್ಪಿಯೋ ಹಾದು ಹೋಯಿತು. ಸಂಜೆ ಏಳು ಗಂಟೆ ಸುಮಾರಿಗೆ ಮೌನೇಶನ ತಮ್ಮನಾದ ಮುದೆಪ್ಪ ಕುರಿ ಮೇಯಿಸಿಕೊಂಡು ಬಂದು ಜನತಾ ಮನೆಯಲ್ಲಿ ಬಿಟ್ಟು ಬೀಗ ಹಾಕಿಕೊಂಡು ತಾನು ವಾಸವಿರುವ ಮನೆಗೆ ತೆರಳಿದನು. ಡಿ. 4ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಜನತಾ ಮನೆಗೆ ಬಂದು ನೋಡಲಾಗಿ ಮನೆಯ ಕೀಲಿ ಮುರಿದಿತ್ತು. ಒಳಗೆ ಬಂದು ಕುರಿ ಎಣಿಸಲಾಗಿ 66 ಕುರಿಗಳು ಇದ್ದು, ಇನ್ನೂ ನಾಲ್ಕು ಕುರಿ ಕಾಣಲಿಲ್ಲ. ಗಾಬರಿಗೊಂಡ ಮುದೆಪ್ಪನು ಮೌನೇಶನಿಗೆ ತಿಳಿಸಿದ್ದು ಎಲ್ಲರೂ ಹುಡುಕಾಡಿ ಕೊನೆಗೆ ಸಿಗದೇ ಇದ್ದುದರಿಂದ ಶೋರಾಪುರ ಠಾಣೆಗೆ ದೂರು ನೀಡಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)