ತಾಂಬಾದಲ್ಲಿ ವಿದ್ಯುತ್ ವೈಯರ್ ಕಳವು, ಗ್ರಾಮೀಣ ಠಾಣೆಗೆ ಹೆಸ್ಕಾಂ ಜೆಇ ದೂರು….!
ಸರಕಾರ್ ನ್ಯೂಸ್ ಇಂಡಿ
ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯಲಾದ ಬೋರ್ ವೆಲ್‌ಗೆ ಸರ್ಕಾರದಿಂದ ಮಂಜೂರಾದ ಟಿಸಿಯಿಂದ ಜೋಡಿಸಿದ್ದ ವಿದ್ಯುತ್ ವೈಯರ್ ಕಳವು ಮಾಡಲಾಗಿದೆ.
ಇಂಡಿ ತಾಲೂಕಿನ ತಾಂಬಾ ಗ್ರಾಮದ ರಾಮಣ್ಣ ವಿಠೋಬಾ ಆಳೂರ ಇವರ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ಅಂದಾಜು 70 ಸಾವಿರ ರೂ. ಮೌಲ್ಯದ ವೈಯರ್ ಕಳುವಾಗಿದೆ. ಈ ಬಗ್ಗೆ ಇಂಡಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪ್ರಕರಣದ ವಿವರ:
ರಾಮಣ್ಣ ಆಳೂರ ಇವರ ಜಮೀನ ಸ.ನಂ. 449/7ರಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಕೊರೆಯಿಸಲಾಗಿದ್ದು, ಸರ್ಕಾರದಿಂದ ಟಿಸಿ ಮಂಜೂರಾಗಿದೆ. ಇದಕ್ಕೆ 8 ಕಂಬಗಳು ಹಾಗೂ ವೈಯರ್ ಮ್ತು ಅದಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ಹೆಸ್ಕಾಂನಿಂದ ಪೂರೈಸಲಾಗಿದೆ. ಸದರಿ ರಾಮಣ್ಣ ಆಳೂರ ಜಮೀನಿನಲ್ಲಿ ಇರುವ ಬೋರ್‌ವೆಲ್ ವರೆಗೂ ಪಕ್ಕದ ಜಮೀನಿನವರಾದ ಶ್ರೀಮಂತ ಶರಣಪ್ಪ ಕಲ್ಲೂರ ಇವರ ಜಮೀನಿನಲ್ಲಿ ಇರುವ ಮೇನ್ ಲೈನ್‌ನಿಂದ ಒಟ್ಟು 8 ಕಂಬಗಳನ್ನು ಹಾಕಿದ್ದು ಅದರಲ್ಲಿ 6 ಕಂಬಗಳಿಗೆ ಎಳೆದಿರುವ 3 ಎಳೆ ವೈಯರ್ ಮತ್ತು 2 ಕಂಬಕ್ಕೆ ಎಳೆದಿರುವ 4 ಎಳೆಯ ವೈಯರ್‌ಗಳನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಇಂಡಿ ಹೆಸ್ಕಾಂ ಜೆಇ ರಮೇಶ ಕಾಮು ಚವಾಣ್ ಇಂಡಿ ಗ್ರಾಮೀಣ ಠಾಣೆಗೆ ದೂರು ಸಲ್ಲಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)