ವಿಜಯಪುರ

ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ನೀರುಪಾಲು, ಸಹೋದರರ ದುರ್ಮರಣ ! ಅಯ್ಯೋ ದುರ್ವಿಧಿಯೇ…!

ಸರಕಾರ ನ್ಯೂಸ್ ಮುದ್ದೇಬಿಹಾಳ

ಅಜ್ಜಿ ಜೊತೆ ಬಟ್ಟೆ ತೊಳೆಯಲು ಕಾಲುವೆಗೆ ತೆರಳಿದ್ದ ಇಬ್ಬರೂ ನೀರುಪಾಲಾದ ಘಟನೆ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಇಲ್ಲಿನ ಕೆಬಿಜೆಎನ್‌ಎಲ್ ಕಾಲುವೆಯಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ಈ ಘಟನೆ ನಡೆದಿದ್ದು, ರಸೂಲ್ ಮಾಲದಾರ(25) ಹಾಗೂ ಸಮಿವುಲ್ಲಾ ಗೊಳಸಂಗಿ(10) ಮೃತ ದುರ್ದೈವಿಗಳು.

ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದವರು ಎನ್ನಲಾದ ಇವರು ಸಂಬಂಧದಲ್ಲಿ ಸಹೋದರರು.

ವೃತ್ತಿಯಿಂದ ಕೂಲಿ ಕಾರ್ಮಿಕರಾಗಿದ್ದು, ಮುದ್ದೇಬಿಹಾಳದ ಚಿಕನ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಜ್ಜಿ ಬಟ್ಟೆ ತೊಳೆಯುತ್ತಿರಬೇಕಾದರೆ ಸ್ನಾನ ಮಾಡಲು ಕಾಲುವೆಗೆ ಇಳಿದಿದ್ದ ಇವರು, ನೀರಿನ ಸೆಳೆತಕ್ಕೆ ಸಿಲುಕಿ ಅಸುನೀಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರ ಸಹಾಯದಿಂದ ಶವ ಹೊರಕ್ಕೆ ತೆಗೆಯಲಾಗಿದೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!