ಬಿಜೆಪಿ ಮುಖಂಡ ಅಪ್ಪುಗೌಡರ ಕಾರ್ ಅಪಘಾತ, ಗಾಯಾಳು ಗೌಡರು ಖಾಸಗಿ ಆಸ್ಪತ್ರೆಗೆ ದಾಖಲು
ಸರಕಾರ್ ನ್ಯೂಸ್ ಕೊಲ್ಹಾರ
ಬಿಜೆಪಿ ಮುಖಂಡ ಅಪ್ಪುಗೌಡ ಪಾಟೀಲ ಮನಗೂಳಿ ಅವರ ಕಾರು ಅಪಘಾತಕ್ಕೆ ಒಳಗಾಗಿದ್ದು, ಕಾರ್ ನಲ್ಲಿದ್ದ ಅಪ್ಪುಗೌಡರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ರಾಷ್ಟ್ರೀಯ ಹೆದ್ದಾರಿ ಮೂಲಕ ವಿಜಯಪುರ ಮಾರ್ಗವಾಗಿ ಬರುತ್ತಿದ್ದಾಗ ಕೊಲ್ಹಾರ ತಾಲೂಕಿನ
ಬೆಣ್ಣಿಹಳ್ಳದ ಹತ್ತಿರ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.
ಮುಖಾಮುಖಿ ಡಿಕ್ಕಿಯಿಂದಾಗಿ ಕಾರ್ ಮುಂದಿನ ಭಾಗ
ನುಜ್ಜುಗುಜ್ಜಾಗಿದೆ.
ಗಾಯಾಳು ಅಪ್ಪುಗೌಡರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.