ರಂಜಾನ್ ದಿನವೇ ಭೀಕರ ಕೊಲೆ, ಜಾಮೀಯಾ ಮಸೀದಿ ಬಳ ಘಟನೆ
ಸರಕಾರ ನ್ಯೂಸ್ ವಿಜಯಪುರ
ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲೊಂದಾದ ರಂಜಾನ್ ದಿನವೇ ವ್ಯಕ್ತಿ ಯೋರ್ವನನ್ನು ಭೀಕರವಾಗಿ ಹತ್ಯೆಗೈಯಲಾಗಿದೆ.
ವಿಜಯಪುರ ನಗರದ ಜಾಮೀಯಾ ಮಸೀದಿ ಬಳಿ ಗುರುವಾರ ಸಂಜೆ ಈ ಘಟನೆ ನಡೆದಿದೆ.
ಸ್ಥಳೀಯ ನಿವಾಸಿ ರಜೀನ್ ಜಮಾದಾರ್ ( 27 ) ಎಂಬಾತ ಕೊಲೆಯಾಗಿದ್ದಾನೆ.
ಪೇಟಿ ಬಾವಡಿ ಪ್ರದೇಶದ ನಿವಾಸಿಯಾಗಿರುವ ರಜೀನ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.
ಹಳೆಯ ವೈಷಮ್ಯದ ಕಾರಣದಿಂದ ಕೊಲೆಗೈದಿರೋ ಸಂಶಯವಿದ್ದು,
ಸ್ಥಳಕ್ಕೆ ಗೋಲಗುಂಬಜ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)