ವಿಜಯಪುರ

ಸಿಡಿಲಾರ್ಭಟಕ್ಕೆ ಬಲಿಯಾದವರಿಗೆ ಪರಿಹಾರ ಕೋರಿ ಸಿಎಂ ಗೆ ಪತ್ರ, ಶಾಸಕ ಯಶವಂತರಾಯಗೌಡ ರ ಪತ್ರದಲ್ಲೇನಿದೆ ಗೊತ್ತಾ?

ಸರಕಾರ ನ್ಯೂಸ್ ವಿಜಯಪುರ

ಸಿಡಿಲಿನ ಆರ್ಭಟಕ್ಕೆ ಕುರಿಗಾಹಿ ಮತ್ತು ರೈತನೋರ್ವ ಅಸುನೀಗಿದ್ದು, ಎರಡೂ ಕುಟುಂಬಗಳಿಗೆ ಪರಿಹಾರ ಕಲ್ಪಿಸುವಂತೆ ಶಾಸಕ ಯಶವಂತರಾಯಗೌಡ ಪಾಟೀಲ ಸಿಎಂ ಸಿದ್ದರಾಮಯ್ಯ ಗೆ ಮನವಿ ಮಾಡಿದ್ದಾರೆ.

ಇಂಡಿ ಪಟ್ಟಣದ ಹೊರವಲಯ ಹಾಗೂ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಕೃಷಿ ಕಾರ್ಯದಲ್ಲಿ ತಲ್ಲೀನವಾಗಿದ್ದ ಇಬ್ಬರು ಗುರುವಾರ ಸಿಡಿಲಿಗೆ ಬಲಿಯಾಗಿದ್ದಾರೆ.

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಬರೆದ ಪತ್ರ.

ಪಟ್ಟಣದ ಹೊರವಲಯದಲ್ಲಿ ಕುರಿ ಮೇಯಿಸುತ್ತಿದ್ದ 15 ವರ್ಷದ ಬಾಲಕ ಬೀರಪ್ಪ ನಿಂಗಪ್ಪ ಅವರಾದಿ ಹಾಗೂ ಹಿರೇಮಸಳಿಯಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಸೋಮಶೇಖರ ಕಾಶಿನಾಥ ಪಟ್ಟಣಶೆಟ್ಟಿ (43) ಸಿಡಿಲಿಗೆ ಜೀವ ತೆತ್ತಿದ್ದಾರೆ.

ಬಿಸಿಲೂರಿನಲ್ಲಿ ವರುಣಾಘಾತ, ಸಿಡಿಲಿಗೆ ಇಬ್ಬರು ಬಲಿ ! ಅಯ್ಯೋ ದುರ್ವಿಧಿಯೇ…!!!

ಈ ಇಬ್ಬರ ಕುಟುಂಬಸ್ಥರಿಗೆ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಘೋಷಿಸಬೇಕೆಂದು ಶಾಸಕ ಯಶವಂತರಾಯಗೌಡ ರು ಸಿದ್ದರಾಮಯ್ಯ ಮತ್ತು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಮನವಿ ಮಾಡಿದ್ದಾರೆ.

(ಕ್ಷಣ ಕ್ಷಣದ ಮಹತ್ವಸ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!