ಸಿಡಿಲಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೆ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ಎಲ್ಲರಿಗೂ ತಿಳಿಸಿ, ಜೀವ ರಕ್ಷಿಸಲು ನೆರವಾಗಿ
ಸರಕಾರ ನ್ಯೂಸ್ ಬೆಂಗಳೂರ
ಮಳೆ ಬಂತೆಂದರೆ ಸಾಕು ಗುಡುಗು, ಸಿಡಲು, ಮುಂಚಿನ ಆರ್ಭಟ ಎಂಥವರನ್ನೂ ಭಯಭೀತರನ್ನಾಗಿಸುತ್ತದೆ. ಕೃಷಿ ಪ್ರಧಾನ ರಾಷ್ಟ್ರವಾದ ಭಾರತದಲ್ಲಿ ಸಿಡಿಲಿಗೆ ಅನೇಕ ರೈತರು, ಜಾನುವಾರು ಸಾವಿಗೀಡಾಗುತ್ತಲೇ ಇವೆ. ಹಾಗಾದರೆ, ಈ ಸಿಡಿಲಿನಿಂದ ರಕ್ಷಿಸಿಕೊಳ್ಳುವುದು ಹೇಗೆ? ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ ಏನು? ಇಲ್ಲಿದೆ ಮಾಹಿತಿ-
ಬಿಸಿಲೂರಿನಲ್ಲಿ ವರುಣಾಘಾತ, ಸಿಡಿಲಿಗೆ ಇಬ್ಬರು ಬಲಿ ! ಅಯ್ಯೋ ದುರ್ವಿಧಿಯೇ…!!!
*ತಗ್ಗು ಪ್ರದೇಶ ಇಲ್ಲದೇ ಬಯಲಿನಲ್ಲಿ ಇರಬೇಕಾದರೆ ನಿಮ್ಮ ತಲೆಯನ್ನು ಮೊಳಕಾಲುಗಳ ನಡುವೆ ಹುದುಗಿಸಿಕೊಳ್ಳಿ. ಇದು ಮಿಂಚಿನಿಂದ ಮಿದುಳಿಗೂ ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ.
*ಮರಗಳಿದ್ದ ಪ್ರದೇಶದಲ್ಲಿ ನೀವಿದ್ದರೆ ಅಲ್ಲಿಂದ ಬೇಗನೆ ಹೊರಬರುವುದು ಒಳ್ಳೆಯದು. ಏಕೆಂದರೆ ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂಥ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ.
*ಮಳೆ ಬರುವಾಗ ಎತ್ತರದ ಗುಡ್ಡದ ಮೇಲಿದ್ದರೆ ಆಳವಾದ ತಗ್ಗಿಗೆ ಇಳಿಯಿರಿ.
* ಕುರಿಮಂದೆ ಅಥವಾ ಜಾನುವಾರು ಮಧ್ಯೆ ಇದ್ದರೆ ಅವುಗಳ ಮಧ್ಯದಲ್ಲಿ ಅವಿತು ಕುಳಿತುಕೊಳ್ಳಿರಿ. ಏಕೆಂದರೆ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ಮನುಷ್ಯನನ್ನೇ ಆಯ್ದುಕೊಳ್ಳುತ್ತದೆ.
*ಮಳೆ ಬರುವಾಗ ಕೆರೆಯಲ್ಲಿ ಈಜುವುದು, ಸ್ನಾನ ಮಾಡುವುದು ಬೇಡ. ನೀರಿನಲ್ಲಿದ್ದರೆ ತಕ್ಷಣ ಹೊರಬನ್ನಿ.
*ಗುಡುಗು-ಸಿಡಿಲಿನ ಆರ್ಭಟ ಇದ್ದ ಸಂದರ್ಭ ಫೋನ್ ಮಾಡಬೇಡಿ. ಅದನ್ನು ಚಾಜ್ ಮಾಡುವ ಸಾಹಸವೂ ಬೇಡ.
*ವಿದ್ಯುತ್ ಕಂಬ, ಇಲೆಕ್ಟ್ರಿಕಲ್ ಟವರ್, ಮೊಬೈಲ್ ಟವರ್, ಟ್ರಾನ್ಸಫರ್ಮರ್ ಮುಂತಾದವುಗಳ ಹತ್ತಿರ ಇರಬೇಡಿ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)