ಸರ್ಕಾರಿ ಶಾಲೆ ಪ್ರಯೋಗಾಲಯದಲ್ಲಿ ಕಳ್ಳತನ, ಎಲ್ಲಿ? ಹೇಗಾಯಿತು?
ಸರಕಾರ್ ನ್ಯೂಸ್ ವಿಜಯಪುರ
ನಗರದ ದೌಲತಕೋಟೆ ರಸ್ತೆಯಲ್ಲಿರುವ ಉರ್ದು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ.1ರ ಪ್ರಯೋಗಾಲಯದ ಕೀಲಿ ಮುರಿದು ಕಳ್ಳತನ ಮಾಡಲಾಗಿದೆ.
ಅ. 25ರಂದೇ ಈ ಘಟನೆ ನಡೆದಿದ್ದು ಮೇಲಾಧಿಕಾರಿಗಳಿಗೆ ಘಟನೆ ವಿವರಿಸಿ ಅವರಿಂದ ಅನುಮತಿ ಪಡೆದು ಇದೀಗ ಅಂದರೆ ನ.8ರಂದು ಶಾಲಕೆ ಮುಖ್ಯಾಪಾಧ್ಯಾಯಿನಿ ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಪ್ರಕಾರ ಪ್ರಯೋಗಾಲಯದಲ್ಲಿದ್ದ ಎರಡು ಮೈಕ್ರೋಸ್ಕೋಪ್, 2 ಟ್ರೈಪಾಡ್ ಸ್ಟ್ಯಾಂಡ್ ಮತ್ತು ಟ್ರೈಯಂಗಲ್ ಟ್ಯಾಪ್, ಸ್ಪಿರಿಟ್ ಲ್ಯಾಂಪ್, ಸ್ಪಿರಿಟ್ ಬಾಟಲ್, ಟೆಸ್ಟ್ ಟ್ಯೂಬ್ ಸ್ಟ್ಯಾಂಡ್, ಎಸಿ ಡೈನೋಂಾ ಮಾಡಲ್, ಪ್ರಾಜೆಕ್ಟ್ ಕಿಟ್, ಸೋಲಾರ್ ಜಿ-ಪ್ಲಾನೆಟ್ ಸಟ್, ಎಚ್.ಎಸ್. ಮ್ಯಾಗ್ನಿಟಲ್ ಬಾನರ್‌ಮೆಂಟ್, ಸೋಲಾರ ಮತ್ತುಲುನರ್, ವಾಟರ್ ಸೈಕಲ್, ಎಗ್ ಡೌಲ್ಪಮೆಂಟ್ ವೀಲ್, ಮಕ್ಕಳ ಊಟದ ಸ್ಟೀಲ್ ತಾಟುಗಳು, ಸ್ಟೀಲ್ ಗ್ಲಾಸ್ ಹೀಗೆ ಸುಮಾರು 31360 ರೂ.ಮೌಲ್ಯದ ಸಾಮಗ್ರಿ ಕಳುವಾಗಿದೆ.
ಅಲ್ಲದೇ, ಕಳ್ಳತನ ವೇಳೆ ಕೆಲವು ಸಾಮಗ್ರಿಗಳನ್ನು ನಾಶ ಪಡಿಸಲಾಗಿದೆ ಎಂದು ಮುಖ್ಯಾಪಾಧ್ಯಾಯಿನಿ ಹಸೀನಾಬಿ ಅಬ್ದುಲ್ ಕರೀಂ ಸಲವಾತಿ ದೂರಿನಲ್ಲಿ ತಿಳಿಸಿದ್ದಾರೆ.