ನಮ್ಮ ವಿಜಯಪುರ

ಸತೀಶ ಜಾರಕಿಹೊಳಿಗೆ ಯತ್ನಾಳ ಟಾಂಗ್, ಬಾಯಿ ಮುಚ್ಕೊಂಡಿದ್ದರೆ ಛಲೋ….ಇಲ್ಲಾಂದ್ರೆ…!

ಸರಕಾರ್ ನ್ಯೂಸ್ ವಿಜಯಪುರ

ಹಿಂದೂ ಪದ ಪರ್ಶಿಯನ್ ಭಾಷೆಯಿಂದ ಬಂದಿದ್ದು ಅದೊಂದು ಅಶ್ಲೀಲ ಪದ ಎಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ವಿರುದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದ್ದಾರೆ.

ಬುಧವಾರ ಸಿದ್ದೇಶ್ವರ ದೇವಸ್ಥಾನದ ಎದುರು ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು,
ಶಾಸಕ ಸತೀಶ ಜಾರಕಿಹೊಳಿ ಬಾಯಿ ಮುಚ್ಕೊಂಡು ಸುಮ್ಮನೆ ಇರಬೇಕು ಎಂದಿದ್ದಾರೆ.

ಹಿಂದೂ ಎಂಬುದು ಸಾವಿರಾರು ವರ್ಷದ ಸನಾತನ ಧರ್ಮ. ಅದನ್ನರಿಯದೇ ಯಾರೋ ಬರೆದಿದ್ದು ಓದಿ ಹೇಳಿದ್ದು ಖಂಡನೀಯ ಎಂದರು.

ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿರುವ ಶಾಸಕ ಜಾರಕಿಹೊಳಿಯ‌ನ್ನು ತಕ್ಷಣವೇ ಕಾಂಗ್ರೆಸ್‌ನಿಂದ ಉಚ್ಛಾಟನೆ ಮಾಡಬೇಕು ಎಂದು ಆಗ್ರಹಿಸಿದರು.

ಅಲ್ಲದೇ, ಜಾರಕಿಹೊಳಿ ದೊಡ್ಡ ಸಿದ್ಧಾಂತ ಸಿಕಾಮಣಿನಾ..?
ಸುಮ್ಮನೆ ಬಾಯಿ ಮುಚ್ಕೊಂಡು ಕುಳಿತುಕೊಂಡ್ರೆ ಛಲೋ. ಇಲ್ಲಾಂದ್ರೆ ಬರುವ ನ.13ಕ್ಕೆ ಗೋಕಾಕಕ್ಕೆ ಹೋಗ್ತಾ ಇದ್ದು ಅಲ್ಲಿ. ಬರೋಬ್ಬರಿ ಉತ್ತರ ನೀಡ್ತೇನೆ. ಪಂಚಮಸಾಲಿ, ಹಿಂದೂ ಬಗ್ಗೆ ಸತೀಶ ಜಾರಕಿಹೊಳಿ ಮಾತನಾಡಿದ್ದಾರೆ.
ಚುನಾವಣೆಯಲ್ಲಿ‌ ನಿಜವಾದ ಹಿಂದೂ ಧರ್ಮದವರು ಏನು ಅನ್ನೊದು ತೋರಿಸುತ್ತಾರೆ ಎಂದರು.

error: Content is protected !!