ನಮ್ಮ ವಿಜಯಪುರ

ವಿಜಯಪುರದಲ್ಲಿ ಅಂಗಡಿ ಕಳ್ಳತನ, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ಸರಕಾರ್ ನ್ಯೂಸ್ ವಿಜಯಪುರ

ಇತ್ತೀಚೆಗೆ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು ಭಾನುವಾರ ವಿಜಯಪುರ ನಗರದ ವಾಜಪೇಯಿ ಸರ್ಕಲ್‌ನಲ್ಲಿರುವ ಕಿರಾಣಿ ಅಂಗಡಿ ಹಾಗೂ ಮೆಡಿಕಲ್‌ನಲ್ಲಿ ಭಾನುವಾರ ಕಳ್ಳತನ ನಡೆದಿದೆ.

ಕಳ್ಳರು ಎರಡು ಅಂಗಡಿಗೆ ನುಗ್ಗಿ ಸಾವಿರಾರು ನಗದು ಹಾಗೂ ವಸ್ತುಗಳನ್ನು ಕಳ್ಳತನಗೈದು ಪರಾರಿಯಾಗಿದ್ದಾರೆ.

ರಾಜು ಗಡೆದ ಎಂಬುವರಿಗೆ ಸೇರಿದ ಮೆಡಿಕಲ್ ಅಂಗಡಿಯಲ್ಲಿ 50 ಸಾವಿರ ನಗದು, ಕಿರಾಣಿ ಅಂಗಡಿಯಲ್ಲಿ 5 ಸಾವಿರ ನಗದು ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಂಧಿ ಚೌಕ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸೀಲಿಸಿದರು.

error: Content is protected !!