ನಮ್ಮ ವಿಜಯಪುರ

ಸಾರವಾಡ ಆರೋಗ್ಯ ಕೇಂದ್ರದಲ್ಲಿ ಕಳ್ಳತನ, ಔಷಧ ಸಾಮಗ್ರಿಗೆ ಬೆಂಕಿ ಸ್ಪರ್ಶ

ಸರಕಾರ್‌ ನ್ಯೂಸ್‌ ಬಬಲೇಶ್ವರ

ಬಬಲೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಸಾರವಾಡ “ಎʼʼ ಉಪ ಕೇಂದ್ರದ ಸರ್ಕಾರಿ ಕಟ್ಟಡದ ಬಾಗಿಲು ಮುರಿದು ದಾಖಲಾತಿಗಳನ್ನು ಕಳ್ಳತನ ಮಾಡಿರುವುದಲ್ಲದೇ ಔಷಧ ಸಾಮಗ್ರಿಗಳಿಗೆ ಬೆಂಕಿ ಹಚ್ಚಿದ ಪ್ರಕರಣ ಬೆಳಕಿಗೆ ಬಂದಿದೆ.

ನ. 21ರಂದು ಬೆಳಗ್ಗೆ 9.30ರ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದ್ದು ನ.22ರಂದು ವೈದ್ಯಾಧಿಕಾರಿ ಡಾ.ಶೀತಲ ಕಿಣಗಿ ಪ್ರಕರಣ ದಾಖಲಿಸಿದ್ದಾರೆ.

ಸರ್ಕಾರಿ ಕಟ್ಟಡದ ಬಾಗಿಲು ಒಡೆದು ದಾಖಲಾತಿ ಕಳವು ಮಾಡಿದ್ದಲ್ಲದೇ ಸಾರ್ವಜನಿಕರ ಆರೋಗ್ಯಕ್ಕಾಗಿ ನೀಡುವ ಔಷಧಿ ಸಾಮಗ್ರಿಗಳಿಗೆ ಬೆಂಕಿ ಹಚ್ಚಿರುವ ಕುರಿತು ದೂರು ದಾಖಲಿಸಲಾಗಿದೆ. ಅಂದಾಜು 5000 ದಿಂದ 6000ರೂ. ಮೌಲ್ಯದ ಸಾಮಗ್ರಿ ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ, ದಾಖಲಾತಿ ಕಳುವಾಗಿದೆ ಎಂಬುದು ಮಹತ್ವದ ಸಂಗತಿ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ಸ್ಕ್ರೈಬ್‌ ಮಾಡಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!