ನಮ್ಮ ವಿಜಯಪುರ

ಕೇದಾರದಲ್ಲೂ ಪುನೀತ ನೆನಪು, ವಿಜಯಪುರ ಯುವಕರ ಅಭಿಮಾನಕ್ಕೆ ಮೆಚ್ಚುಗೆ

ಸರಕಾರ್ ನ್ಯೂಸ್ ವಿಜಯಪುರ

ಕರ್ನಾಟಕ ರತ್ನ ದಿ‌. ಪುನೀತರಾಜ್ ಕುಮಾರ ಇನ್ನೂ ಅಭಿಮಾನಿಗಳ ಅಂತರಾಳದಲ್ಲಿ ಜೀವಂತವಾಗಿದ್ದಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ವಿಜಯಪುರದ ಯುವಕರು ಪುನೀತ್ ರಾಜ್ ಕುಮಾರ ಅವರ ಭಾವಚಿತ್ರದೊಂದಿಗೆ ಕೇದಾರಲಿಂಗೇಶ್ವರದ ದರ್ಶನ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಜಯಪುರದ ಪ್ರಶಾಂತ, ಜಗದೀಶ, ಅಬ್ದುಲ್ ರೆಹಮಾನ್ ಹಾಗೂ ನಿಂಗಪ್ಪಾ ಎಂಬುವವರು ಕೇದಾರದಲ್ಲಿ ಪುನೀತ್ ಭಾವಚಿತ್ರಕ್ಕೆ ಪೂಕೆ ಸಲ್ಲಿಸಿದ್ದಾರೆ.
ಆ ಮೂಲಕ ಅಪ್ಪು ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ.

error: Content is protected !!