ನಮ್ಮ ವಿಜಯಪುರ

ತೊರವಿ ತಾಂಡಾದಲ್ಲಿ ತಾಯಿ- ಮಕ್ಕಳ ಸಾವಿನ ಪ್ರಕರಣ, ಮೂವರು ಬಂಧನ

ಸರಕಾರ್‌ ನ್ಯೂಸ್ ವಿಜಯಪುರ

ತಿಕೋಟಾ ತಾಲೂಕಿನ ತೊರವಿ ತಾಂಡಾ-1ರಲ್ಲಿ ಕೃಷಿ ಹೊಂಡದಲ್ಲಿ ತಾಯಿ ಮತ್ತು ಮೂವರು ಮಕ್ಕಳು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮೃತಳ ಪತಿ ಪಿಂಟೂ ಜಾಧವ್ (34), ಧರ್ಮು ಜಾಧವ್ (60) ಹಾಗೂ ವಿಠಲ್ ಜಾಧವ್ (32) ಬಂಧಿತ ಆರೋಪಿಗಳು.
ಜೂ.15 ರಂದು ಪಿಂಟೂ ಜಾಧವ್‌ನ ಪತ್ನಿ ಅನಿತಾ ಹಾಗೂ ಇವರ ಮೂವರು ಮಕ್ಕಳಾದ ಪ್ರವೀಣ (6), ಸುದೀಪ (4) ಹಾಗೂ ಮಮದಿಕಾ (2) ಎಂಬುವರು ಕೃಷಿ ಹೊಂಡದಲ್ಲಿ ಬಿದ್ದು ಸಾವಿಗೀಡಾಗಿದ್ದರು. ಘಟನೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿತ್ತು. ಘಟನೆ ಬಳಿಕ ಪಿಂಟೂ ಕುಟುಂಬಸ್ಥರೆಲ್ಲರೂ ನಾಪತ್ತೆಯಾಗಿದ್ದರು. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ತಂದಿದ್ದಾರೆ.

error: Content is protected !!