ಕಾಂಗ್ರೆಸ್ ಚುನಾವಣೆ ಸಮಿತಿಗೆ ಎಂ.ಬಿ. ಪಾಟೀಲ, ಶರಣಪ್ಪ ಸುಣಗಾರ ನೇಮಕ
ಸರಕಾರ್ ನ್ಯೂಸ್ ಬೆಂಗಳೂರು
ರಾಜ್ಯ ವಿಧಾನ ಸಭೆ ಚುನಾವಣೆ ಚುರುಕುಗೊಳ್ಳುತ್ತಿದ್ದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮೀತಿ ಇನ್ನಷ್ಟು ಸಕ್ರಿಯವಾಗಿದ್ದು, ಚುನಾವಣೆ ದೃಷ್ಠಿಕೋನದಿಂದ ವಿಶೇಷ ಸಮಿತಿ ರಚಿಸಿದೆ.
ಒಟ್ಟು 36 ಪ್ರಮುಖ ನಾಯಕರನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, ಅದರಲ್ಲಿ ವಿಜಯಪುರದ ಶಾಸಕ ಎಂ.ಬಿ. ಪಾಟೀಲ ಹಾಗೂ ಸಿಂದಗಿ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರಿಗೆ ಆದ್ಯತೆ ನೀಡಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಈಶ್ವರ ಖಂಡ್ರೆ ಸೇರಿದಂತೆ ಅನೇಕರಿದ್ದಾರೆ. ಪ್ರಾದೇಶಿಕತೆ, ಜಾತಿ ಲೆಕ್ಕಾಚಾರ ಹಾಗೂ ನಾಯಕತ್ವದ ಪ್ರಭಾವ ಆಧರಿಸಿ ಸಮಿತಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಶಾಸಕ ಎಂ.ಬಿ. ಪಾಟೀಲ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿದ್ದು, ಶರಣಪ್ಪ ಸುಣಗಾರ ಹಿಂದುಳಿದ ಸಮುದಾಯದ ಹಿರಿಯ ನಾಯಕರಾಗಿದ್ದಾರೆ. ಹೀಗಾಗಿ ಆ ಸಮುದಾಯದ ಮತ ಸೆಳೆಯುವ ತಂತ್ರಗಾರಿಕೆಯೂ ಇದಾಗಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)