ಉರುಸ್ ವೇಳೆ ಗಲಾಟೆ, ಹಾಡು ಬಂದ್ ಮಾಡುವಂತೆ ಕಂಬಕ್ಕೆ ಕಟ್ಟಿ ಥಳಿತ !
ಸರಕಾರ್ ನ್ಯೂಸ್ ವಿಜಯಪುರ
ಉರುಸು ಕಾರ್ಯಕ್ರಮದಲ್ಲಿ ಹಾಡು ಹಚ್ಚಿ ಡ್ಯಾನ್ಸ್ ಮಾಡುತ್ತಿದ್ದ ಯುವಕನ ಮೇಲೆ 14 ಜನರ ಗುಂಪೊಂದು ಹಲ್ಲೆ ನಡೆಸಿದೆ.
ವಿಜಯಪುರ ತಾಲ್ಲೂಕಿನ ಡೊಮನಾಳ ಗ್ರಾಮದಲ್ಲಿ ಶುಕ್ರವಾರ ಉರುಸು ನಡೆದಿತ್ತು. ಈ ವೇಳೆ ಯುವಕ ಸಾಗರ್ ಎಂಬಾತ ಡ್ಯಾನ್ಸ್ ಮಾಡುತ್ತಿದ್ದನು. ಇದನ್ನು ಬಂದ್ ನೋಡಿ ಹಾಡು ಬಂದ್ ಮಾಡಿಸಿದ 14ಜನರ ಗುಂಪು ಆತನನನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಗಾಯಗೊಂಡಿರುವ ಸಾಗರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಮುಂದುವರಿದಿದ್ದು ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)